ರೈತ ವಿರೋಧಿ ಕಾಯಿದೆಗಳ ವಿರುದ್ಧ ಪ್ರತಿಭಟನೆಗೆ ನಟ ಚೇತನ್ ಸಾಥ್

ಬೆಂಗಳೂರು, ಸೆಪ್ಟೆಂಬರ್ 28, 2020 (www.justkannada.in): ನಟ ಚೇತನ್ ಇಂದು ನಡೆಯುತ್ತಿರುವ ಬಂದ್ ಗೆ ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಚೇತನ್ ಕೂಡ ಸಾಥ್ ನೀಡಿದ್ದಾರೆ.

ಬೆಂಗಳೂರಿನ ಸುಮನಹಳ್ಳಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಚೇತನ್ ಪಾಲ್ಗೊಂಡಿದ್ದಾರೆ.

ಈ ವೇಳೆ ಮಾತನಾಡಿದ ಚೇತನ್, ಕಾರ್ಪೊರೇಟ್ ಕುಳಗಳಿಗೆ ರೈತರ ಭೂಮಿ ಮಾರಾಟ ಮಾಡುವ, ಅನ್ನದಾತನನ್ನು ಬೀದಿಯಲ್ಲಿ ನಿಲ್ಲಿಸುವ ಮಸೂದೆಗಳು ನಮಗೆ ಬೇಡ. ಉಳುವವನೇ ಒಡೆಯನಾಗಿರಬೇಕು ಎಂದಿದ್ದಾರೆ.