Sunday, October 25, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Front Page ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಚರ್ಚಿಸಿದ ಪ್ರಧಾನಿ ಮೋದಿ..

ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಚರ್ಚಿಸಿದ ಪ್ರಧಾನಿ ಮೋದಿ..

 

ನವದೆಹಲಿ,ಮಾರ್ಚ್,7,2022(www.justkannada.in) ಪ್ರಧಾನಿ ನರೇಂದ್ರ ಮೋದಿ  ಅವರು ದೂರವಾಣಿ ಮೂಲಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆಂಬ  ಮಾಹಿತಿ ಲಭ್ಯವಾಗಿದೆ.

ದೂರವಾಣಿ ಕರೆ ಮೂಲಕ ಪುಟೀನ್ ಜತೆ ಸುಮಾರು 50 ನಿಮಿಷಗಳ ಕಾಲ ಚರ್ಚಿಸಿದ್ದಾರೆ ಎನ್ನಲಾಗಿದೆ.   ಉಕ್ರೇನ್ ನಲ್ಲಿ ಕದನ ವಿರಾಮ ಘೋಷಿಸಿದ ಹಿನ್ನೆಲೆ ರಷ್ಯಾವನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ನೇರವಾಗಿ ನೀವೇ ಒಮ್ಮೆ ಮಾತನಾಡಿ ಎಂದು ಪುಟಿನ್​ರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಚರ್ಚಿಸಿದ ಪ್ರಧಾನಿ ಮೋದಿ putimn

ಇದಕ್ಕೂ ಮುನ್ನ  ಪ್ರಧಾನಿ ಮೋದಿ ಅವರು  ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಅವರ  ಜತೆ ಮಾತನಾಡಿದ್ದಾರೆ. ಹಾಗೇ, ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ ಎನ್ನಲಾಗಿದೆ.

Key words: PM-Modi-discussed – Russian President- Putin.