ಕೆಲಸ ಮಾಡಿಸ್ತಿರುವುದು ನಾನು, ಸ್ಕೋಪ್ ಬೇರೆಯವರದ್ದು- ಸಿ.ಪಿ ಯೋಗೆಶ್ವರ್ ಗೆ ಹೆಚ್.ಡಿಕೆ ಟಾಂಗ್.

ರಾಮನಗರ,7,2022(ww.justannada.in): ಚನ್ನಪಟ್ಟಣ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಇಂಜಿನಿಯರ್ ಕರೆದೊಯ್ದು ಎಂಎಲ್ ಸಿ ಕೆರೆ ವೀಕ್ಷಣೆ ಮಾಡಿದ್ದಾರೆ. ಕೆಲಸ ಮಾಡಿಸ್ತಿರುವುದು ನಾನು, ಸ್ಕೋಪ್ ಬೇರೆಯವರದ್ದು ಎಂದು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಎಂಎಲ್ ಸಿ ಕೆರೆ ವೀಕ್ಷಣೆ ಮಾಡಿದ್ದಾರೆ.  ಸಿ.ಪಿ. ಯೋಗೇಶ್ವರ್ ಸ್ಕೋಪ್ ತೆಗೆದುಕೊಳ್ಳಲು ಬಂದಿದ್ದಾರೆ.ಆದರೆ ಜನರನ್ನ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದರು.

 

ಮೇಕೆದಾಟು ಪಾದಯಾತ್ರೆ ಹಣೆಬರಹ ಎಲ್ಲಿಗೆ ಬಂದಿದೆ. 10 ದಿನ ಭೂರಿ ಭೋಜನ ತಿಂದಿದ್ದೇ ಸಿಕ್ಕಿದ್ದು ಇವರಿಗೆ. ಬಜೆಟ್‌ನಲ್ಲಿ 1,000 ಕೋಟಿ ಪಡೆದು ಏನು ಮಾಡ್ತೀರಾ. ಸಾವಿರ ಕೋಟಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

Key words: hd kumaraswamy- CP Yogeshwar-ramnagar