ಮೈಸೂರಿನಲ್ಲಿ ಪಿಂಚಣಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ.

ಮೈಸೂರು,ಮಾರ್ಚ್,7,2022(www.justkannada.in): ಕಾರ್ಮಿಕ ಅಧಿಕಾರಿಗಳ ಸೂಚನೆ ಮೇರೆಗೆ  ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಶ್ರಮ ಯೋಗಿ ಮಾನ್-ಧನ್ ಯೋಜನೆಯಡಿ  ಮೈಸೂರಿನಲ್ಲಿ ಪಿಂಚಣಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.

ನಗರದ ಕೃಷ್ಣ ಮೂರ್ತಿಪುರಂ, ಚಾಮರಾಜ ಮೊಹಲ್ಲಾದಲ್ಲಿರುವ  ಹೋಟೆಲ್ ಹಾನರ್ಸ್ ಅಶೋಷಿಯೇಷನ್  ನಲ್ಲಿ ಆಯೋಜಿಸಿದ್ದ ಪಿಂಚಣಿ ಸಪ್ತಾಹ ಕಾರ್ಯಕ್ರಮವನ್ನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಭೂತೆ ಕಾರ್ಯಕ್ರಮ  ಉದ್ಘಾಟಿಸಿದರು.  

ಈ ವೇಳೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: mysore- Pension- Saptaha- program.