ಭಾರತದ ಕ್ಷಮತೆ ಮೇಲೆ ಸಂಪೂರ್ಣ ವಿಶ್ವಾಸ: ದೇಶದ ಅರ್ಥ ವ್ಯವಸ್ಥೆ ಮೇಲೆತ್ತುವುದೇ ನಮ್ಮ ಆದ್ಯತೆ- ಪ್ರಧಾನಿ ಮೋದಿ…

ನವದೆಹಲಿ,ಜೂ,1,2020(www.justkannada.in): ಭಾರತದ ಕ್ಷಮತೆ ಮೇಲೆ ಸಂಪೂರ್ಣ ವಿಶ್ವಾಸವಿದೆ. ದೇಶದ ಅರ್ಥ ವ್ಯವಸ್ಥೆ ಮೇಲೆತ್ತುವುದೇ ನಮ್ಮ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಸಿಐಐ 125 ವರ್ಷ ಪೂರೈಸಿದ ಹಿನ್ನೆಲೆ ಅಭಿನಂದನೆ ಸಲ್ಲಿಸಿ ವಾರ್ಷಿಕ ಅಧಿವೇಶನ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ವಿರುದ್ದ ಹೋರಾಡಲು ಕ್ರಮ ಕೈಗೊಳ್ಳಬೇಕು, ಜತೆಗೆ ದೇಶದ ಅರ್ಥವ್ಯವಸ್ಥೆಯನ್ನೂ ಬಲಿಷ್ಟಗೊಳಿಸಬೇಕು. ಎಲ್ಲಾ ಸಂಕಷ್ಠಗಳಿಂದ ಹೊರಬರುವುದು ಮನುಷ್ಯನ ತಾಕತ್ತು. ಜೀವ ಉಳಿಸಿಕೊಳ್ಳುವುದರ ಜತೆ ಆರ್ಥಿಕ ಸುಧಾರಣೆಯಾಗಬೇಕು ಎಂದು ಹೇಳಿದರು. PM Modi- Complete -confidence -uplift – country- economy.

ಅನ್ ಲೈನ್ ಇವೆಂಟ್ ಈಗ ಅವಶ್ಯಕವಾಗಿದೆ.  ಆತ್ಮನಿರ್ಬರ ಭಾರತ ಅಭಿಯಾನದ ಮೂಲಕ ಅರ್ಥವ್ಯವಸ್ಥೆ ಮೇಲಕ್ಕೆ ಎತ್ತೋದೊಂದೆ ನಮ್ಮ ಆದ್ಯತೆಯಾಗಿದೆ. ಆತ್ಮನಿರ್ಬರ ಭಾರತಕ್ಕಾಗಿ 5’I’ ಫಾರ್ಮೂಲ. ಇನ್ಫ್ರಾ,  ಇನ್ ವೆಸ್ಟ್ ಮೆಂಟ್, ಇನೋವೇಷನ್, ಇಂಟೆಂಟ್ . ಭಾರತದ ಉದ್ಯಮಿಗಳು ರೈತರ ಮೇಲೆ ನಮಗೆ ವಿಶ್ವಾಸವಿದೆ. ಭಾರತದ ಕ್ಷಮತೆ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಾವು ಕೊರೋನಾ ಮೊದಲ ಹೆಜ್ಜೆಯಲ್ಲೇ ಸರಿಯಾದ ಕ್ರಮ ಕೈಗೊಂಡಿದ್ದೇವೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದ್ದೇವೆ. ಜೂನ್ 8ರ ಬಳಿಕ ಮತ್ತಷ್ಟು ಕೆಲಸಗಳು ಪ್ರಾರಂಭವಾಗಲಿವೆ. ಭಾರತದ ಅರ್ಥವ್ಯವಸ್ಥೆ ಮತ್ತೆ ಹಳಿಗೆ ಬರುವ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

75 ಕೋಟಿ ಜನರಿಗೆ ಪಡಿತರವನ್ನ ನೀಡಿದ್ದೇವೆ.8 ಕೋಟಿಗೂ ಹೆಚ್ಚು ಜನರಿಗೆ ಸಿಲಿಂಡರ್ ವಿತರಿಸಿದ್ದೇವೆ. ರೈತರು ತಾವು  ಬಯಸಿದ್ದಲ್ಲಿ ಉತ್ಪನ್ನಗಳನ್ನ ಮಾರಬಹುದು.ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆ ತರುತ್ತಿದ್ದೇವೆ. ಕಲ್ಲಿದ್ದಲು ಕ್ಷೇತ್ರದಲ್ಲಿ ವಾಣಿಜ್ಯ ಗಣಿಗಾರಿಕೆಗೆ  ಅವಕಾಶ. ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ ಪ್ರಧಾನಿ ಮೋದಿ,  ಕೊರೋನಾ ಸಂಕಷ್ಟದಲ್ಲೂ ಭಾರತದಿಂದ 150 ದೇಶಗಳಿಗೆ ವೈದ್ಯಕೀಯ ನೆರವು ನೀಡಿದೆ. ಕೇಂದ್ರ ಸರ್ಕಾರ ಉದ್ಯಮಿಗಳ ಜತೆ ಇದೆ. ಉದ್ಯಮಿಗಳು ವಿಶ್ವದ ಭರವಸೆ ಬಳಸಿಕೊಳ್ಳಬೇಕು. ಭಾರತ ಪ್ರತಿನಿತ್ಯ 3 ಲಕ್ಷ ಪಿಪಿಇ ಕಿಟ್ ಉತ್ಪಾದಿಸುತ್ತದೆ.  ಮೇಕ್ ಇಂಡಿಯಾದಿಂದ ಉದ್ಯೋಗ ಸೃಷ್ಠಿಯಾಗಿದೆ.  ಮೇಕ್ ಇಂಡಿಯ ಮೇಡ್ ಪಾರ್ ದಿ ವರ್ಲ್ಡ್ ಆಗಲಿ ಎಂದು ತಿಳಿಸಿದರು.

Key words:  PM Modi- Complete -confidence -uplift – country- economy.