Saturday, August 22, 2026

BDA Apartments

Home Front Page ವಿಧಾನಸಭೆಯಲ್ಲಿ ಭದ್ರತಾ ಲೋಪ…? ಬಜೆಟ್ ಮಂಡನೆ ವೇಳೆ ಸದನದಲ್ಲಿ ಬಂದು ಕುಳಿತ ಅಪರಿಚಿತ ವ್ಯಕ್ತಿ.

ವಿಧಾನಸಭೆಯಲ್ಲಿ ಭದ್ರತಾ ಲೋಪ…? ಬಜೆಟ್ ಮಂಡನೆ ವೇಳೆ ಸದನದಲ್ಲಿ ಬಂದು ಕುಳಿತ ಅಪರಿಚಿತ ವ್ಯಕ್ತಿ.

ಬೆಂಗಳೂರು,ಜುಲೈ7,2023(www.justkannada.in):  ಸಿಎಂ ಸಿದ್ದರಾಮಯ್ಯ ಅವರು  ವಿಧಾನಸಭೆಯಲ್ಲಿ ಇಂದು ಬಜೆಟ್ ಮಂಡನೆ ವೇಳೆ  ಭದ್ರತಾ ಲೋಪವಾಗಿರುವ ಆರೋಪ ಕೇಳಿ ಬಂದಿದೆ.

ಸಿಎಂ ಸಿದ್ಧರಾಮಯ್ಯ ಬಜೆಟ್ ಮಂಡಿಸುತ್ತಿದ್ದ ವೇಳೆ ಶಾಸಕರಲ್ಲದ ವ್ಯಕ್ತಿಯೋಬ್ಬ ವಿಧಾನಸಭೆ ಪ್ರವೇಶಿಸಿ ಶಾಸಕರ ಆಸನದಲ್ಲಿ ಕುಳಿತ ಘಟನೆ ನಡೆದಿದೆ. ಬಜೆಟ್​ ಮಂಡನೆ ವೇಳೆ ಸಮಾರು 15 ನಿಮಿಷಗಳ ಕಾಲ ದೇವದುರ್ಗ ಶಾಸಕಿ ಕರೆಯಮ್ಮ ಆಸನದಲ್ಲಿ ಕುಳಿತಿದ್ದಾನೆ. ಇದನ್ನು ಗಮನಿಸಿದ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಅವರಿಗೆ ವ್ಯಕ್ತಿ ಬಗ್ಗೆ ಅನುಮಾನ ಬಂದಿದೆ. ಕೂಡಲೇ ಅವರು ಎದ್ದು ಹೋಗಿ ಸ್ಪೀಕರ್ ಯುಟಿ ಖಾದರ್ ಅವರ ಗಮನಕ್ಕೆ ತಂದಿದ್ದಾರೆ.

ಆದ್ರೆ, ಅಷ್ಟರೊಳಗೆ ಆ ಅನಾಮಿಕ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದು,  ಇದರಿಂದ ಆ ವ್ಯಕ್ತಿ ಯಾರು? ಏಕೆ ಬಂದಿದ್ದ? ಇಷ್ಟೊಂದು ಭದ್ರತೆ ನಡುವೆಯೂ ಆ ವ್ಯಕ್ತಿ ಹೇಗೆ ಸದನದೊಳಗೆ ಪ್ರವೇಶಿಸಿದ್ದನು ಎಂಬ ಪ್ರಶ್ನೆ ಉದ್ಬವಿಸಿದೆ.

Key words: Security -lapse – assembly- unknown person – budget-session