ನಮ್ಮದು ನುಡಿದಂತೆ ನಡೆದ ಸರ್ಕಾರ: ಇದು ಪೂರ್ಣಪ್ರಮಾಣದ ಗ್ಯಾರಂಟಿ ಬಜೆಟ್-ಸಿಎಂ ಸಿದ‍್ಧರಾಮಯ್ಯ ನುಡಿ.

ಬೆಂಗಳೂರು,ಜುಲೈ,7,2023(www.justkannada.in): ನಮ್ಮದು ನುಡಿದಂತೆ ನಡೆದ ಸರ್ಕಾರ. ಇಂದು ಮಂಡಿಸಿದ ಬಜೆಟ್ ಪೂರ್ಣಪ್ರಮಾಣದ ಗ್ಯಾರಂಟಿ ಬಜೆಟ್ ಎಂದು ಸಿಎಂ ಸಿದ‍್ಧರಾಮಯ್ಯ ಹೇಳಿದರು.

ಬಜೆಟ್ ಮಂಡನೆ ಬಳಿ ವಿಧಾನಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ನಾವು ಕೊಟ್ಟ ಮಾತಿನಂತೆ 5 ಗ್ಯಾರಂಟಿ ಜಾರಿ ಮಾಡುತ್ತೇವೆ.  ರಾಜ್ಯ ಆರ್ಥಿಕವಾಗಿ  ದಿವಾಳಿ ಆಗದಂತೆ ನೋಡಿಕೊಂಡಿದ್ದೇವೆ. 5 ಯೋಜನೆಗಳಿಗೆ ಅನುದಾನ ಒದಗಿಸಿದ್ದೇವೆ.  ಈ ಗ್ಯಾರಂಟಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ  5 ಗ್ಯಾರಂಟಿ ಯೋಜನೆಗೆ  ವಾರ್ಷಿಕ 52 ಸಾವಿರ ಕೋಟಿಗೂ ಹೆಚ್ಚು ಬೇಕು ಎಂದರು.

1.30 ಕೋಟಿ ಕುಟುಂಬದ ಯಜಮಾನಿಗೆ ‘ಗೃಹಲಕ್ಷ್ಮೀ’ ಹಣ ನೀಡುತ್ತೇವೆ. ಜುಲೈ 16ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ಆಗಸ್ಟ್​ನಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ. ಆಗಸ್ಟ್​​ 15 ಅಥವಾ 16ರಂದು ಮನೆ ಯಜಮಾನಿ ಖಾತೆಗೆ ಹಣ ಹಾಕಲಾಗುವುದು ಎಂದರು.

ಅನ್ನಭಾಗ್ಯ ಯೋಜನೆಯಿಂದ 4.42 ಕೋಟಿ ಜನರಿಗೆ ಅನುಕೂಲವಾಗಲಿದೆ. ಅನ್ನಭಾಗ್ಯ ಯೋಜನೆ ಈಗಾಗಲೆ ಜಾರಿಯಾಗಿದೆ.  ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ 7 ಕೆ.ಜಿ ಅಕ್ಕಿ ನೀಡುತ್ತಿದ್ದವು.  ಆದ್ರೆ ಈ ಹಿಂದಿನ ಬಿಜೆಪಿ ಸರ್ಕಾರ 5ಕೆಜಿಗೆ ಇಳಿಸಿತು. ಹಾಗಾಗಿ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದವು. ಅನ್ನಭಾಗ್ಯ ಯೋಜನೆಯಿಂದ  ಈ ವರ್ಷ 10,275 ಕೋಟಿ ರೂ ವೆಚ್ಚವಾಗುತ್ತದೆ. ನಮಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಪೂರೈಸಲ್ಲ ಎಂದಿದೆ. ಈ ಮೂಲಕ ರಾಜಕೀಯ ಮಾಡಿದೆ ಎಂದು ಕಿಡಿಕಾರಿದರು.

Key words: government -guarantee -budget- CM Sidduramaiah