ನಗರ ಬಸ್ ನಿಲ್ದಾಣ-ವಿಮಾನ ನಿಲ್ದಾಣದ ನಡುವೆ ಏಳು ಬಸ್‍ಗಳು ಸಂಚಾರ

ಮೈಸೂರು,ಡಿಸೆಂಬರ್,13,2020(www.justkannada.in) : ಕೆಎಸ್ ಆರ್ ಟಿಸಿ ನೌಕರರ ಮುಷ್ಕರದಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಸಮಸ್ಯೆ ಎದುರಾಗಿದ್ದು, ನಗರ ಬಸ್ ನಿಲ್ದಾಣದಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಒದಗಿಸಿದ್ದಾರೆ.logo-justkannada-mysoreಸಂಸದ ಪ್ರತಾಪ್ ಸಿಂಹ ಅವರು ನಗರ ಸಾರಿಗೆಗೆ ನಿರ್ದೇಶನ ನೀಡಿ ನಗರ ಬಸ್ ನಿಲ್ದಾಣದಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಒದಗಿಸಿದ್ದಾರೆ. ಒಟ್ಟು ಏಳು ಬಸ್‍ಗಳು ನಗರ ಬಸ್ ನಿಲ್ದಾಣ-ವಿಮಾನ ನಿಲ್ದಾಣ ನಡುವೆ ಸಂಚರಿಸಲಿದೆ.

ಬಸ್ ಸಂಚಾರದ ಸಮಯ

ನಗರ ಬಸ್ ನಿಲ್ದಾಣದಿಂದ ಬೆ.6.15, 9.05, ಮಧ್ಯಾಹ್ನ 12, 1.45, 2.35, 3.15, ಸಂಜೆ 5.50ಕ್ಕೆ ವಿಮಾನ ನಿಲ್ದಾಣಕ್ಕೆ ಬಸ್‍ಗಳು ಹೊರಡಲಿವೆ. ಅದೇ ರೀತಿ ವಿಮಾನ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಬೆ.6.50, 9.40, ಮಧ್ಯಾಹ್ನ 12.35, 2.20, 3.10, 3.40 ಮತ್ತು ಸಂಜೆ 6.25ಕ್ಕೆ ಆಗಮಿಸಲಿದೆ.

ಬಸ್ ದರ

ನಗರ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 100 ರೂ., ಅದೇ ರೀತಿ ಗಣಪತಿ ಸಚ್ಚಿದಾನಂದ ಆಶ್ರಮದಿಂದ 70, ರ್ಯಾಡಿಸನ್ ಬ್ಲೂ ಹೋಟೆಲ್ ನಿಂದ 70 ರೂ., ಜಿಂಜರ್ ಹೋಟೆಲ್ ನಿಂದ 80 ರೂ., ಜೆಪಿ ಪ್ಯಾಲೆಸ್ ಹೋಟೆಲ್ ನಿಂದ 80 ರೂ., ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 100 ರೂ. ಟಿಕೆಟ್ ದರ ನಿಗದಿ ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

City-Bus-Station-Airport-between-Seven-buses- Traffic

key words : City-Bus-Station-Airport-between-Seven-buses- Traffic