Saturday, October 17, 2026

Dasara Wishes

Happy Dasara
Home Front Page ಕಲ್ಬುರ್ಗಿಗೆ ಪ್ರಧಾನಿ ಮೋದಿ ಆಗಮನ: ಸೊಲ್ಲಾಪುರಕ್ಕೆ ಪ್ರಯಾಣ.

ಕಲ್ಬುರ್ಗಿಗೆ ಪ್ರಧಾನಿ ಮೋದಿ ಆಗಮನ: ಸೊಲ್ಲಾಪುರಕ್ಕೆ ಪ್ರಯಾಣ.

ಕಲಬುರಗಿ,ಜನವರಿ,19,2024(www.justkannada.in ): ಪ್ರಧಾನಿ ನರೇಂದ್ರ ಮೋದಿ ಅವರು  ಕಲಬುರಗಿಗೆ ಆಗಮಿಸಿದ್ದು,ಸರ್ಕಾರದ ಪರವಾಗಿ ಸಚಿವ ಶರಣಪ್ರಕಾಶ್  ಪಾಟೀಲ್‌ ಸ್ವಾಗತ ಮಾಡಿದರು.

ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸಚಿವ ಶರಣಪ್ರಕಾಶ್  ಪಾಟೀಲ್‌ ಸ್ವಾಗತಿಸಿದ್ದು ಈ ವೇಳೆ ಕೇಂದ್ರ ಸಚಿವ ಭಗವಂತಖೂಬ ಸಂಸದ ಉಮೇಶ್ ಜಾಧವ್ ಉಪಸ್ಥಿತರಿದ್ದರು.

ಪಿಎಂ ಆವಾಸ್ ಯೋಜನೆಯಡಿ ಬಡವರಿಗೆ ಮನೆಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಸೊಲ್ಲಾಪುರಕ್ಕೆ ತೆರಳಿದ್ದಾರೆ. ಕಲ್ಬುರ್ಗಿಗೆ ಪ್ರಧಾನಿ ಮೋದಿ ಆಗಮನ: ಸೊಲ್ಲಾಪುರಕ್ಕೆ ಪ್ರಯಾಣ modi

ಸೊಲ್ಲಾಪುರಕ್ಕೆ ಭೇಟಿ ಬಳಿಕ ಅಲ್ಲಿಂದ ಕಲಬುರಗಿಗೆ ಆಗಮಿಸಿ ಬಳಿಕ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬರಲಿದ್ದಾರೆ. ಈ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಮೋದಿ ಸಂಚರಿಸುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

Key words: PM -Modi- arrival – Kalburgi