ಇಡೀ ರಾಜ್ಯದಲ್ಲೇ ಪರ್ಸೆಂಟೇಜ್ ವ್ಯವಹಾರ: ಇದು ಪ್ರಧಾನಿ ಮೋದಿಗೆ ಗೊತ್ತಿಲ್ವಾ..? ಮಾಜಿ ಸಿಎಂ ಹೆ್ಚ್.ಡಿಕೆ.

ರಾಮನಗರ,ಆಗಸ್ಟ್,24,2022(www.justkannada.in): ಇಡೀ ರಾಜ್ಯದಲ್ಲೇ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿದೆ. ಈ ವಿಚಾರ ಪ್ರಧಾನಿ ಮೋದಿಗೆ ಗೊತ್ತಿಲ್ವೆ..? ಎಂದು ಮಾರ್ಮಿಕವಾಗಿ ನುಡಿದರು.

ರಾಮನಗರದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ದೆಹಲಿಯ ಕೆಂಪುಕೋಟೆಯ  ಮೇಲೆ ನಿಂತು ಭ್ರಷ್ಟಾಚಾರ ನಿರ್ಮೂಲ ಮಾಡುತ್ತೇನೆ ಎಂದು ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿರುವ 40% ಕಮೀಷನ್ ಕಾಣುತ್ತಿಲ್ಲವೇ  ಎಂದು ಪ್ರಶ್ನಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಾಗಿದ್ದರೂ ಅವರಿಗೆ ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಹೆಚ್.ಡಿಕೆ  ಕಿಡಿಕಾರಿದರು.

Key words: Percentage- business –BJP-Former CM- H.D kumaraswamy