ಇಬ್ಬರು ಕನ್ನಡಿಗರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.  

ಬೆಂಗಳೂರು,ಆಗಸ್ಟ್,24,2022(www.justkannada.in): 2022ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಇಬ್ಬರು ಕನ್ನಡಿಗರು ಆಯ್ಕೆಯಾಗಿದ್ದಾರೆ.

ಕೇಂದ್ರದ ಯುವ ಸಾಹಿತ್ಯ ಪ್ರಶಸ್ತಿಗೆ ದಾದಾಪೀರ್ ಹಾಗೂ ಬಾಲ ಸಾಹಿತ್ಯ ಪ್ರಶಸ್ತಿಗೆ ತಮ್ಮಣ್ಣ ಬೀಗಾರ್ ಆಯ್ಕೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಮ್ಮಣ್ಣ ಬೀಗಾರ್ ಗೆ ಬಾವಲಿ ಗುಹೆ ಎನ್ನುವ ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯಕ್ಕೆ ಈ ಪ್ರಶಸ್ತಿ ದೊರೆತಿದೆ. ಇನ್ನು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ದಾದಪಿರ್ ಜಯ್ಮನ್  ಅವರಿಗೆ ನೀಲಕುರಂಜಿ ಕಥಾ ಸಂಕಲನಕ್ಕೆ ಕೇಂದ್ರ ಯುವ ಸಾಹಿತ್ಯ ಪ್ರಶಸ್ತಿ ದೊರೆತಿದೆ.

Key words: Central –Sahitya- Akademi -Award – Dadapeer-Thammanna bigar