ರಾಜ್ಯದ ಜನರು ಕೊರೋನಾ ನೈಟ್ ಕರ್ಫ್ಯೂಗೆ ಸಹಕರಿಸಿ – ಸಿಎಂ ಬಿಎಸ್ ವೈ ಮನವಿ…

ರಾಯಚೂರು,ಏಪ್ರಿಲ್,11,2021(www.justkannada.in):  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಹೀಗಾಗಿ ಜನರು ನೈಟ್ ಕರ್ಫ್ಯೂಗೆ ಸಹಕರಿಸಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.Sanskrit Vivia,8th event,30 people,Ph.D,43graduates,M.Phil,Awarded 

ಈ ಕುರಿತು ಇಂದು ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾದ ಕಾರಣ 8 ನಗರಗಳಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಯಾರೂ ನೈಟ್ ಕರ್ಪ್ಯೂ ಉಲ್ಲಂಘನೆ ಮಾಡಬಾರದು. ಇಂದಿನಿಂದ ಲಸಿಕೆ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದರು. People -cooperate - Corona -Night Curfew-  CM BS yeddyurappa

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಜೊತೆ ಚರ್ಚಿಸಿದ್ದು ಸಲಹೆ ಸೂಚನೆಯನ್ನ  ನೀಡಿದ್ದಾರೆ. ಹಾಗೆಯೇ ಎಲ್ಲಾ ವಿಚಾರಗಳ ಕುರಿತು ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದೇನೆ. ಕೊರೊನಾ ಹೆಚ್ಚಿರುವ ಸ್ಥಳಗಳಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಜನರು ಮಾಸ್ಕ್, ಸಾಮಾಜಿಕ ಅಂತರ ಪಾಲಿಸಬೇಕು, ನೈಟ್ ಕರ್ಪ್ಯೂಗೆ ಸಹಕಾರ ಕೊಡಬೇಕು ಎಂದು  ಮನವಿ ಮಾಡಿದರು.

Key words: People -cooperate – Corona -Night Curfew-  CM BS yeddyurappa