Tuesday, August 4, 2026

BDA Apartments

Home Front Page ಜೆಡಿಎಸ್ ಮುಗಿದೇ ಹೋಯ್ತು ಎನ್ನುವವರಿಗೆ ಚುನಾವಣೆಯಲ್ಲೇ ಜನರೇ ಉತ್ತರ ಕೊಡ್ತಾರೆ- ಮಾಜಿ ಸಿಎಂ ಹೆಚ್.ಡಿಕೆ.

ಜೆಡಿಎಸ್ ಮುಗಿದೇ ಹೋಯ್ತು ಎನ್ನುವವರಿಗೆ ಚುನಾವಣೆಯಲ್ಲೇ ಜನರೇ ಉತ್ತರ ಕೊಡ್ತಾರೆ- ಮಾಜಿ ಸಿಎಂ ಹೆಚ್.ಡಿಕೆ.

ಚನ್ನಪಟ್ಟಣ,ಮೇ,8,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದ್ದು, ಮನೆ ಮನೆಗೆ ತೆರಳಿ ಮತಯಾಚನೆಗಷ್ಟೆ ಅವಕಾಶವಿದೆ. ಇನ್ನು ಇಂದು ಕೊನೆಯ ದಿನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸುತ್ತಿದ್ದಾರೆ.

ಚನ್ನಪಟ್ಟಣದ ಶೇರು ಸರ್ಕಲ್ ನಿಂದ ಮಂಗಳವಾರಪೇಟೆವರೆಗೆ ಸುಮಾರು 3 ಕಿ.ಮೀವರೆಗೆ  ಹೆಚ್.ಡಿ ಕುಮಾರಸ್ವಾಮಿ ರೋಡ್ ಶೋ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿರುವ ಹೆಚ್.ಡಿಕೆ,  ಪಂಚರತ್ನ ಯೋಜನೆ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿದ್ದೇನೆ.   ನಿರಂತರವಾಗಿ ಜನರ ಬಳಿ ಹೋಗಿ ಪ್ರಚಾರ ಮಾಡಿದ್ದೇನೆ.  ಸ್ಪಷ್ಟ ಬಹುಮತ ಕೊಟ್ಟರೇ  ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಯಾರೂ ಅಮಿಷಕ್ಕೆ ಒಳಗಾಗದೇ ಮತದಾನ ಮಾಡಲು ಮನವಿ ಮಾಡುತ್ತೇನೆ.  ಜೆಡಿಎಸ್ ಮುಗಿದೇ ಹೋಯ್ತು  ಎನ್ನುವವರಿಗೆ ಈ ಚುನಾವಣೆಯಲ್ಲಿ ಜನರು ಉತ್ತರ ಕೊಡುತ್ತಾರೆ ಎಂದು ಹೇಳಿದರು.

key words:  People – answer – JDS –over-election – Former CM -H.D.kumaraswamy