ಬಿಜೆಪಿ ರೇಟ್ ಕಾರ್ಡ್ ಕೊಟ್ಟಿದ್ದು ಬಿಜೆಪಿಯವರು, ನಾನಲ್ಲ- ಡಿ.ಕೆ ಶಿವಕುಮಾರ್ ತಿರುಗೇಟು.

ಬೆಂಗಳೂರು,ಮೇ,8,2023(www.justkannada.in):  ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಕಾಂಗ್ರೆಸ್ ಪಕ್ಷ ನೀಡಿರುವ ಜಾಹಿರಾತು ಕುರಿತು ಚುನಾವಣಾ ಆಯೋಗ ನೋಟಿಸ್​ ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್ , ನನಗೆ ನೋಟಿಸ್ ನೀಡಿದ್ದರು.  ನಾನು ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಿದ್ದೇನೆ. ಈಗ ಆಧಾರ ಏನು ಅಂತ ಕೇಳಿದ್ದಾರೆ. ಬಿಜೆಪಿಯ ರೇಟ್ ಕಾರ್ಡ್  ಕೊಟ್ಟಿದ್ದು ನಾನಲ್ಲ ಬಿಜೆಯವರೇ ರೇಟ್ ಕಾರ್ಡ್ ಕೊಟ್ಟಿದ್ದು. ಗೂಳಿಹಟ್ಟಿ ಶೇಖರ್, ಬಸನಗೌಡಪಾಟೀಲ್ ಯತ್ನಾಳ್, ವಿಶ್ವನಾಥ್ ಅವರೇ ರೇಟ್ ಕಾರ್ಡ್ ಕೊಟ್ಟಿದ್ದಾರೆ.  ಸಿಎಂ ಹುದ್ದೆಗೆ ಎಷ್ಟು,  ಮಂತ್ರಿಗಳಿಗೆಷ್ಟು ಇದೆಲ್ಲಾ ರೇಟ್ ಕಾರ್ಡ್ ಕೊಟ್ಟಿದ್ದು ಬಿಜೆಪಿಯವರೇ ಎಂದರು.

ಬಿಜೆಪಿ ನಾಯಕರ ಹೇಳಿಕೆ ಮೇಲೆಯೇ ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೋಮು ಗಲಭೆ ಆಗುತ್ತೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರಿಗೂ ನೋಟಿಸ್​ ಕೊಡಬೇಕು ಅಲ್ವಾ? ನಾನು ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಿದ್ದೇನೆ. ಚುನಾವಣಾ ಆಯೋಗ ಅಧಿಕಾರಿಗಳು ಈಗ ಆಧಾರ ಕೇಳಿದ್ದಾರೆ. ಆದ್ರೆ ಕಾಂಗ್ರೆಸ್ ವಿರುದ್ಧ ಅಮಿತ್ ಶಾ, ಜೆಪಿ ನಡ್ಡಾ ಕಾಂಗ್ರೆಸ್ ಬಂದ್ರೆ ಕೋಮು ಗಲಭೆ ಆಗುತ್ತೆ ಎಂದಿದ್ದಾರೆ. ಇವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

Key words: BJP – rate – not me –kpcc-president- DK Shivakumar