ವರುಣಾದಲ್ಲಿ ಸಿದ‍್ಧರಾಮಯ್ಯ ಸೋಲು ನಿಶ್ಚಿತ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಮಂಗಳೂರು,ಮೇ,8,2023(www.justkannada.in):   ರಾಜ್ಯದಲ್ಲಿ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಲಿದ್ದಾರೆ. ವರುಣಾದಲ್ಲಿ ಸಿದ್ಧರಾಮಯ್ಯ ಸೋಲೋದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭವಿಷ್ಯ ನುಡಿದರು.

ಮಂಗಳೂರಿನಲ್ಲಿ ಇಂದು ಮಾತನಾಡಿದ ನಳೀನ್  ಕುಮಾರ್ ಕಟೀಲ್, ಪ್ರಧಾನಿ ಮೋದಿ ಕಾರ್ಯಕ್ರಮದ ಬಳಿಕ ಬಿಜೆಪಿಗೆ 10ರಿಂದ 15 ಸ್ಥಾನಗಳು ಹೆಚ್ಚಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಯೋಜನೆಗಳನ್ನ ಜಾರಿ ಮಾಡಲ್ಲ. ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಜನರಿಗೆ ತಲುಪಿದೆ. ಮೋದಿಯವರ ಕಾರ್ಯ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಯೋಜನೆಗಳು ಮನೆಮನೆಗೆ ತಲುಪಿದೆ ಎಂದರು.

ಒಂದು ಕಾಲ ಘಟ್ಟದಲ್ಲಿ ಹಳೇ ಮೈಸೂರು ಜೆಡಿಎಸ್ ಭದ್ರಕೋಟೆ ಆಗಿತ್ತು. ಆದರೆ ಈ ಬಾರಿ ಮೋದಿ ಮತ್ತು ಅಮಿತ್ ಶಾ ಪ್ರವಾಸದ ಕಾರಣಕ್ಕೆ ಅಲ್ಲೂ ನಮಗೆ ಜನ ಬೆಂಬಲ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಅಲ್ಲಿ ನಮಗೆ ಸ್ಥಾನಗಳು ಸಿಗಲಿವೆ. ಈ ಹಿಂದಿನ ಯಾವ ಪ್ರಧಾನಿಯೂ ಮಾಡದ ಕೆಲಸ ಮೋದಿ ಮಾಡಿದ್ದಾರೆ. ಅವರು ಪ್ರವಾಸ ಹೋದಲ್ಲಿ ಜನ ಸೇರಿದ್ದಾರೆ ಎಂದು ತಿಳಿಸಿದರು.

ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ನಾನು ಸಿಎಂ ಹುದ್ದೆ ರೇಸ್ ನಲ್ಲೂ ಇಲ್ಲ.  ಬಿಜೆಪಿ ಅಧ್ಯಕ್ಷ  ಸ್ಥಾನದ ಜವಾಬ್ದಾರಿಯನ್ನ ಯಶಸ್ವಿಯಾಗಿ ನಡೆಸುತ್ತಿದ್ದೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

Key words:  siddaramaiah-defeat – Varuna -BJP -State President -Naleen Kumar Kateel.