Friday, September 11, 2026

BDA Apartments

Home Crime ಮನೆ ಮುಂದೆ ನಿಲ್ಲಿಸಿದ್ಧ ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ: ರೋಸಿಹೋದ ನಿವಾಸಿಗಳು

ಮನೆ ಮುಂದೆ ನಿಲ್ಲಿಸಿದ್ಧ ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ: ರೋಸಿಹೋದ ನಿವಾಸಿಗಳು

ಮೈಸೂರು,ಆಗಸ್ಟ್,16,2021(www.justkannada.in): ಮನೆ ಮುಂದೆ ಬೈಕ್ ನಿಲ್ಲಿಸುವ ಸಾರ್ವಜನಿಕರೇ ಎಚ್ಚರ. ಮೊದಲೆಲ್ಲ ಬೈಕ್ ಕಳ್ಳತನವಾಗ್ತಿತ್ತು, ಇದೀಗ ಬೈಕ್ ಇರುತ್ತೆ ಆದ್ರೆ ಪೆಟ್ರೋಲ್ ಇರಲ್ಲ. ಹೌದು, ಇತ್ತೀಚೆಗೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಮನೆ ಮುಂದೆ ನಿಂತಿರುವ ಬೈಕ್ ಗಳಲ್ಲಿ ಪೆಟ್ರೋಲ್ ಗೆ ಖದೀಮರು ಕನ್ನ ಹಾಕುತ್ತಿದ್ದಾರೆ.

ಇಂತಹದೊಂದು ಘಟನೆ ಮೈಸೂರಿನ ಕೆಲವು ಭಾಗಗಳಲ್ಲಿ ನಡೆದಿದೆ. ಪೆಟ್ರೋಲ್ ದರ ಹೆಚ್ಚಳ ಹಿನ್ನೆಲೆ ಮನೆ ಮುಂದೆ ನಿಂತಿರುವ ಬೈಕ್ ಗಳಲ್ಲಿ ಕಳ್ಳರು ಪೆಟ್ರೋಲ್ ಕಳ್ಳತನ ಮಾಡಿದ್ದು ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೈಸೂರಿನ ಗಾಯತ್ರಿಪುರಂನಲ್ಲಿ ರಾತ್ರಿ ವೇಳೆ ಸುಮಾರು 10ರಿಂದ 15 ಬೈಕ್ ಗಳಲ್ಲಿ  ಪೆಟ್ರೋಲ್ ಅನ್ನ  ಕಳ್ಳತನ ಮಾಡಿದ್ದಾರೆ.

ಪ್ರತಿನಿತ್ಯ ಪೆಟ್ರೋಲ್ ಕಳ್ಳತನದಿಂದ ನಿವಾಸಿಗಳು ರೋಸಿಹೋಗಿದ್ದು, ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಸಿಸಿಟಿವಿ ಇದ್ರೂ ಎಗ್ಗಿಲ್ಲದೇ ಚಾಲಾಕಿಗಳು ಪೆಟ್ರೋಲ್ ಕದಿಯುತ್ತಿದ್ದಾರೆ. ಕೂಡಲೇ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

Key words: Patrol- thieves – bikes- parked -in front – house.