ಪತಂಜಲಿ ಯೋಗ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ರವರಿಂದ ದುರ್ಗಾ ನಮಸ್ಕಾರ

kannada t-shirts

ಮೈಸೂರು,ಅಕ್ಟೋಬರ್,13,2021(www.justkannada.in):  ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಬುಧವಾರ ದುರ್ಗಾ ನಮಸ್ಕಾರ ಮಾಡುವ ಮೂಲಕ ಯೋಗಾಸನ ಮಾಡುವವರನ್ನು ಹುರಿದುಂಬಿಸಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಬೆಳಗ್ಗೆ 6 ರಿಂದ 7.30ರವರೆಗೆ ಚಾಮುಂಡಿಬೆಟ್ಟದಲ್ಲಿ ದುರ್ಗಾಷ್ಟಮಿ ದಿನವಾದ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ದುರ್ಗಾ ನಮಸ್ಕಾರ ಕಾರ್ಯಮದಲ್ಲಿ ಸಚಿವರು ಭಾಗವಹಿಸಿದ್ದರು.

ಅಗ್ನಿಹೋತ್ರಕ್ಕೆ ಅಕ್ಷತೆ, ಪುಷ್ಪ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, 40 ವರ್ಷಗಳ ಹಿಂದೆ ಸ್ಥಾಪನೆಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಎಸ್ ಪಿವೈಸಿಸಿ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.

ಯಾವುದೇ ಪ್ರಚಾರ ಇಲ್ಲದೆ ಉಚಿತವಾಗಿ ಕಾರ್ಯಕ್ರಮ ನೀಡುತ್ತಿರುವ ಎಸ್ ಪಿವೈಸಿಸಿ ಹಾಗೂ ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಒಳಿತನ್ನು ಮಾಡಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ರಾಜೀವ್, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಎಸ್ ಪಿವೈಸಿಸಿ ಅಧ್ಯಕ್ಷರಾದ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Key words:Patanjali- Yoga Program -Durga Namaskara -Somashekhar

website developers in mysore