ಹೆಚ್ ಡಿ ಕುಮಾರಸ್ವಾಮಿ ಅವರ ಸದಸ್ಯತ್ವವನ್ನು ರದ್ದು ಮಾಡುವಂತೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಒತ್ತಾಯ

ಮೈಸೂರು,ಅಕ್ಟೋಬರ್,13,2021(www.justkannada.in): ಸಿದ್ದರಾಮಯ್ಯ ವಿರುದ್ದ ಪುಟ್ಕೋಸಿ ಎಂದು ಅಸಂಸದೀಯ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಹೆಚ್ ಡಿ ಕುಮಾರಸ್ವಾಮಿ ಅವರ ಸದಸ್ಯತ್ವವನ್ನು ರದ್ದುಮಾಡಬೇಕು. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ  ಒತ್ತಾಯ ಮಾಡುತ್ತಿದ್ದೇನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಎಂ. ಲಕ್ಷ್ಮಣ್,  ಸಿದ್ದರಾಮಯ್ಯ ಎಂದೂ ಕೂಡ ಥರ್ಡ್ ರೇಟೆಡ್ ಕೆಲಸ ಮಾಡಲ್ಲ. ಪ್ರತಿಪಕ್ಷದ ನಾಯಕ ಎಂದರೆ ಶ್ಯಾಡೊ ಮುಖ್ಯಮಂತ್ರಿ ಇದ್ದಂತೆ. ದೇವೇಗೌಡರು, ಯಡಿಯೂರಪ್ಪ, ನೀವು ಕೂಡ ಪ್ರತಿಪಕ್ಷದ ನಾಯಕರಾಗಿದ್ದವರು. ಇದು ನಿಮ್ಮ ತಂದೆಯ ನಡವಳಿಕೆಗೆ ಮಾಡಿದ ಅವಮಾನ. ನಿಮ್ಮ ತಂದೆಯನ್ನು ನೋಡಿ ನೀವು ಕಲಿತುಕೊಳ್ಳಿ ಎಂದು ಹೆಚ್.ಡಿಕೆಗೆ ಕಿವಿಮಾತು ಹೇಳಿದರು.

ಐಟಿ ದಾಳಿ ವೇಳೆ 750 ಕೋಟಿ  ಸಂಪತ್ತು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ. ಲಕ್ಷ್ಮಣ್, ಈ ಬಗ್ಗೆ ಬಿಜೆಪಿ ಹೈಕಮಾಂಡ್ ಉತ್ತರಿಸಬೇಕು. ಜನರಿಗೆ ಬಿಜೆಪಿ ಉತ್ತರ ನೀಡಬೇಕು. ಯಡಿಯೂರಪ್ಪ ಆಪ್ತರ ಮೇಲೆ ಐಡಿ ದಾಳಿ ನಡೆದಿದೆ. ಯಡಿಯೂರಪ್ಪ ಬಲ ಕುಗ್ಗಿಸಲು ಈ ದಾಳಿ ನಡೆದಿದೆ. ಬಿಜೆಪಿ ವೀರಶೈವರನ್ನು ಯೂಸ್ ಅಂಡ್ ಥ್ರೋ ರೀತಿ ಬಳಸಿಕೊಳ್ತಿದೆ. ಈ ಬಗ್ಗೆ ವೀರಶೈವರು ಎಚ್ಚರ ವಹಿಸಬೇಕು ಎಂದು ಹೇಳಿದರು.

ನೀವು ಬಿಜೆಪಿಯ ಬಿ ಟೀಂ, ಮುಂದೆನೂ ನೀವು ಬಿಜೆಪಿಯ ಬಿ ಟೀಂ

ಬಿಎಸ್ ಯಡಿಯೂರಪ್ಪ ಸಿದ್ದರಾಮಯ್ಯ ಭೇಟಿ ವಿಚಾರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್ , ಇದು ಕುಮಾರಸ್ವಾಮಿ ಅವರ ಬಾಲಿಶ ಹೇಳಿಕೆ. ಸಿದ್ದರಾಮಯ್ಯ ಭೇಟಿ  ಮಾಡುವುದಿದ್ದರೆ ಬೆಳಗ್ಗೆ ನೇರ ಭೇಟಿ ಮಾಡುತ್ತಾರೆ. ಮುಖಕ್ಕೆ ಟವೆಲ್ ಹಾಕಿಕೊಂಡು ಭೇಟಿ ಮಾಡುವುದಿಲ್ಲ. ನೀವು ರಾಜ್ಯದ ಎಲ್ಲಾ ನಾಯಕರ ಮೇಲೆ ಅಟ್ಯಾಕ್ ಮಾಡ್ತೀರಾ. ನೀವು ಬಿಜೆಪಿಯ ಬಿ ಟೀಂ,  ಮುಂದೆನೂ ನೀವು ಬಿಜೆಪಿಯ ಬಿ ಟೀಂ. 30 ಸ್ಥಾನ ಪಡೆದು ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದೀರಾ.?  ನೀವು ಬಿಜೆಪಿ ಏನೇ ತಿಪ್ಪರಲಾಗ ಹಾಕಿದರು ಆಗಲ್ಲ ಹೆಚ್ ಡಿ ಕುಮಾರಸ್ವಾಮಿ ಹುಚ್ಚು ಹುಚ್ಚಂತರಾ ಮಾತನಾಡಬೇಡಿ ಸಿದ್ದರಾಮಯ್ಯ ಅವರು ಈ ಬಗ್ಗೆ ಯಾವುದೇ ಹೇಳಿಕೆ ನೀಡಬೇಡಿ. ಹಾದಿಲಿ ಹೋಗುವ ರೀತಿ ಮಾತನಾಡುವುದಕ್ಕೆ ಪ್ರತಿಕ್ರಿಯೆ ಕೊಡಬೇಡಿ ಎಂದರು.

ಕೆಪಿಸಿಸಿ ಕಚೇರಿಯಲ್ಲಿ  ಮಾಧ್ಯಮ ಸಂಯೋಜಕ ಸಲೀಂ ಹಾಗೂ ಉಗ್ರಪ್ಪ ಮಾತುಕತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಲಕ್ಷ್ಮಣ್, ಡಿ ಕೆ ಶಿವಕುಮಾರ್ ಸಚಿವರಾಗಿದ್ದಾಗ ಯಾವುದೇ ಟೆಂಡರ್ ಕರೆದಿರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಟೆಂಡರ್ ಕರೆದಿರುವುದು. 20% ಫಿಕ್ಸ್ ಆಗಿ ಮುಂಗಡ ಹಣ ಪಡೆಯಲಾಗಿದೆ. ಈ ಬಗ್ಗೆ ಅವರ ಪಕ್ಷದ ವಿಶ್ವನಾಥ್ ಅವರೇ ಆರೋಪ ಮಾಡಿದ್ದಾರೆ. ಡಿಕೆಶಿ ಇಂಧನ ಜಲ ಸಂಪನ್ಮೂಲ ಎರಡು ಇಲಾಖೆ ಸಚಿವರಾಗಿದ್ದರು. ಆದರೆ ಯಾವುದೇ ಟೆಂಡರ್ ಕರೆದಿರಲಿಲ್ಲ. ಉಗ್ರಪ್ಪ ಸಲೀಂ ಅವರಿಗೆ ಮಾಹಿತಿ ಕೊರತೆ ಇದೆ ಎಂದು ಸ್ಪಷ್ಟನೆ ನೀಡಿದರು.

Key words: KPCC spokesperson- M lakshman- HD Kumaraswamy-membership