IPL ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಸೇಲ್ ಆದ ಪ್ಯಾಟ್ ಕಮಿನ್ಸ್: ಈವರೆಗೆ ಖರೀದಿಯಾದ ಆಟಗಾರರ ಪಟ್ಟಿ ಹೀಗಿದೆ..

ದುಬೈ,ಡಿಸೆಂಬರ್,19,2023(www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ ಇಂದು ನಡೆಯುತ್ತಿದ್ದು ಐಪಿಎಲ್ ಇತಿಹಾಸದಲ್ಲೇ  ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾಗಿದ್ದಾರೆ.

2 ಕೋಟಿ ಮೂಲಬೆಲೆಯ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪೈಪೋಟಿ ನಡೆಸಿದವು. ಪ್ಯಾಟ್ ಅಂತಿಮವಾಗಿ ಬರೋಬ್ಬರಿ 20.50 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಪಾಲಾದರು.

ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಅವರನ್ನ ಸನ್ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗೆ ಖರೀದಿಸಿದೆ.

ಇನ್ನು ಈ ಬಾರಿಯ ವಿಶ್ವಕಪ್ ನಲ್ಲಿ ಮಿಂಚಿದ್ದ ನ್ಯೂಜಿಲೆಂಡ್ ತಂಡದ ಯುವ ಆಲ್ ರೌಂಡರ್ ರಚಿನ್ ರವೀಂದ್ರ ಕೇವಲ 1 ಕೋಟಿ 80 ಲಕ್ಷ ರೂ. ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ.

ಟೀಮ್ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಥಾಕೂರ್ (2 ಕೋಟಿ ಮೂಲಬೆಲೆ) ಖರೀದಿಗೆ ಸಿಎಸ್ ​ಕೆ ಮತ್ತು ಹೈದರಾಬಾದ್ ನಡುವೆ ಪೈಪೋಟಿ ಏರ್ಪಟಿತು. ಇವರು 4 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.

ದ. ಆಫ್ರಿಕಾದ ಜೆರಾಲ್ಡ್ ಕೋಟ್ಝಿ (2 ಕೋಟಿ ಮೂಲಬೆಲೆ) ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಂದೆಬಂತು. ಇವರು 5 ಕೋಟಿಗೆ ಮುಂಬೈ ಪಾಲಾಗಿದ್ದಾರೆ.

ಆರ್​ಸಿಬಿ ಮಾಜಿ ಆಟಗಾರ ಹರ್ಷಲ್ ಪಟೇಲ್  ಖರೀದಿಗೆ ಗುಜರಾತ್, ಲಕ್ನೋ ಮತ್ತು ಪಂಜಾಬ್ ಮುಂದೆ ಬಂತು. ಕಠಿಣ ಪೈಪೋಟಿಯ ನಡುವೆ ಇವರು ಅಂತಿಮವಾಗಿ ಬರೋಬ್ಬರಿ 11.75 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ.

1 ಕೋಟಿ ಮೂಲಬೆಲೆಯೊಂದಿಗೆ ಕಾಣಿಸಿಕೊಂಡ ನ್ಯೂಝಿಲೆಂಡ್ ಆಲ್ರೌಂಡರ್ ಡೇರಿಲ್ ಮಿಚೆಲ್ ಖರೀದಿಗೆ ಡೆಲ್ಲಿ, ಚೆನ್ನೈ ಮತ್ತು ಪಂಜಾಬ್ ನಡುವೆ ಕಾಳಗ ನಡೆಯಿತು. ಕೊನೆಯಲ್ಲಿ ಇವರು 14 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.

Key words: Pat Cummins -sold – highest- amount – IPL- history