ಮಠಾಧಿಪತಿಗಳು ಬೀದಿಗಿಳಿಯಲು ಮಾಯಾವಿ ಯಡಿಯೂರಪ್ಪ ಕಾರಣ- ವಾಟಾಳ್ ನಾಗರಾಜ್  ಆಕ್ರೋಶ…

ಮೈಸೂರು,ಫೆಬ್ರವರಿ,21,2021(www.justkannada.in):   ಮೀಸಲಾತಿಗಾಗಿ ಆಗ್ರಹಿಸಿ ಮಠಾಧಿಪತಿಗಳು ಬೀದಿಗಿಳಿದು ಹೋರಾಟ ಮಾಡುತ್ತಿರುವುದನ್ನ ಖಂಡಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್  ಮಠಾಧಿಪತಿಗಳು ಬೀದಿಗಳಿಯಲು ಮಾಯಾವಿ ಯಡಿಯೂರಪ್ಪ ಕಾರಣ ಎಂದು ಕಿಡಿಕಾರಿದ್ದಾರೆ.jk

ಮೀಸಲಾತಿಗಾಗಿ ಆಗ್ರಹಿಸಿ ಮಠಾಧೀಶರಿಂದ ಹೋರಾಟ ಹಿನ್ನೆಲೆ, ಮಠಾಧೀಶರ ವಿರುದ್ದ ಕನ್ನಡ ಪರ ಹೋರಾಟಗಾರ ವಾಟಾಳ್  ನಗರದ ಹಾರ್ಡಿಂಜ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು, ಮಠಾಧೀಶರು ಬಸವಣ್ಣನ ತತ್ವ ಒಪ್ಪಿದ್ರೆ ಹೋರಾಟ ನಡೆಸಬೇಡಿ, ಈ ಹೋರಾಟಗಳಿಂದ ನಿಮ್ಮ ಶಕ್ತಿಗೆ ಕುಂದಾಗುತ್ತೆ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮ‌ ರಾಜ್ಯ. ಜಾತಿ ಬಿಟ್ಟು ಕನ್ನಡನಾಡಿಗಾಗಿ ಭಾಷಾ ಚಳವಳಿಗೆ ಬನ್ನಿ. ಮಠಾಧೀಶರು ಹೀಗೆ ಆದ್ರೆ ಚುನಾವಣೆಗೆ ಬರಬಹುದು. ಸಂಸತ್, ಅಸೆಂಬ್ಲಿ ಪ್ರವೇಶ ಮಾಡ್ತಾರೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಯಡಿಯೂರಪ್ಪ ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಯಡಿಯೂರಪ್ಪ ಕೆಲವರನ್ನು ಪಾದಯಾತ್ರೆ ಮಾಡಿ, ಮೆರವಣಿಗೆ ಮಾಡಿ ಅಂತ ಹೇಳ್ತಾರೆ. ಒಂದು ಕ್ಷಣ ಅವರು ಅಧಿಕಾರದಲ್ಲಿ ಇರಲು ಯೋಗ್ಯತೆ ಇಲ್ಲ.ಈ ಕೂಡಲೆ  ಅವರು ರಾಜೀನಾಮೆ ನೀಡಬೇಕು. ನೀವು ಒಂದು ಕಡೆ ನಿಮ್ಮ ಮಗ ಒಂದು ಕಡೆ ರಾಜ್ಯ ಹಾಳು ಮಾಡುತ್ತಾ ಇದ್ದೀರಿ. ಜಾತಿ ರಾಜಕಾರಣ ಬಿಡಿ ಭಾಷೆ ರಾಜಕಾರಣ ಮಾಡಿ ಎಂದು ಕಿಡಿಕಾರಿದರು.panchamasali- reservation-  Vatal Nagaraj –outrage-against- swamiji’s

ವಾಟಾಳ್ ಹತ್ತಿರ ದುಡ್ಡಿಲ್ಲ ಅಂತ ನನ್ನ ಬಳಿ ಕೇಳಿಲ್ಲ

ರಾಮ ಮಂದಿರ ದೇಣಿಗೆ ಸಂಗ್ರಹ ವಿವಾದ ಕುರಿತು ಮಾತನಾಡಿದ ವಾಟಾಳ್ ನಾಗರಾಜ್, ಸಿದ್ದರಾಮಯ್ಯ ಒಬ್ಬ ಪ್ರಬುದ್ದ ರಾಜಕಾರಣಿ. ಈ ಹಂತಕ್ಕೆ ಇಳಿಯಬಾರದು. ವಾಟಾಳ್ ಹತ್ತಿರ ದುಡ್ಡಿಲ್ಲ ಅಂತ ನನ್ನ ಬಳಿ ಕೇಳಿಲ್ಲ‌ ಎಂದು ಲೇವಡಿ ಮಾಡಿದರು.

ತೈಲ,ದಿನಸಿ ಪದಾರ್ಥಗಳ ಬೆಲೆ‌ ಏರಿಕೆ ಹಿನ್ನೆಲೆ ಜನಪ್ರತಿನಿಧಿಗಳ ವಿರುದ್ದ ಗುಡುಗಿದ ವಾಟಾಳ್ ನಾಗರಾಜ್, ನಮ್ಮ ಎಂಎಲ್ ಎ, ಎಂಪಿಗಳಿಗೆ ರಾಜ್ಯ ಬೇಕಿಲ್ಲ. ರಾತ್ರೋರಾತ್ರಿ ತೈಲ ಬೆಲೆ‌ ಏರಿಕೆಯಿಂದ ಬಡವರ ಬೆನ್ನು ಮೂಳೆ ಮುರಿದಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಬಡವರನ್ನ ತುಳಿದು ನಾಶ ಮಾಡ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಸಿದ್ದರಾಮಯ್ಯ ಆಗಲಿ ಜೆಡಿಎಸ್‌ ಬಿಜೆಪಿ ಆಗಲಿ ಜಾತಿ ಹೆಸರಲ್ಲಿ ರಾಜಕಾರಣ ಬೇಡ. ಭಾಷಾ ರಾಜಕಾರಣಕ್ಕೆ ಬನ್ನಿ ಎಂದರು.

ಉದ್ಧವ್ ಠಾಕ್ರೆಗೆ ಹುಚ್ಚು ಹಿಡಿದಿದೆ.

ಮಹಾರಾಷ್ಟ್ರ ಗಡಿಯಲ್ಲಿ ಭಾಷಿಕರ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಅಲ್ಲಿನ ಉದ್ಧವ್ ಠಾಕ್ರೆಗೆ ಹುಚ್ಚು ಹಿಡಿದಿದೆ. ಅವರಪ್ಪ ಬಾಳಾಠಾಕ್ರೆಗೂ ಹುಚ್ಚು ಹಿಡಿದು ಸತ್ತು ಹೋದ. ಬಾಂಬೆ ಅರ್ಧ ನಮಗೆ ಸೇರಬೇಕು. ಸೊಲ್ಲಪುರ ನಮಗೆ ಸೇರಬೇಕು. ಹೀಗಾಗಿ ಬೆಳಗಾವಿ ಗಡಿ, ಕಾರವಾರ ಆಗಲಿ, ಸೊಲ್ಲಾಪುರ,  ಬೀದರ್ ಆಗಲಿ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ‌ ಇಲ್ಲ ಎಂದರು.

Key words: panchamasali- reservation-  Vatal Nagaraj –outrage-against- swamiji’s