Wednesday, August 12, 2026

BDA Apartments

Home Front Page “ಭಕ್ತಿಮಾರ್ಗದ ಪ್ರವರ್ತಕ ಮಧ್ವಾಚಾರ್ಯ” : ಶಾಸಕ ಎಸ್.ಎ.ರಾಮದಾಸ್

“ಭಕ್ತಿಮಾರ್ಗದ ಪ್ರವರ್ತಕ ಮಧ್ವಾಚಾರ್ಯ” : ಶಾಸಕ ಎಸ್.ಎ.ರಾಮದಾಸ್

ಮೈಸೂರು,ಫೆಬ್ರವರಿ,21,2021(www.justkannada.in) : ಮಧ್ವಾಚಾರ್ಯರು 74ನೇ ವಯಸ್ಸಿನಲ್ಲಿ ಬದರಿಕಾಶ್ರಮಕ್ಕೆ ಒಬ್ಬರೇ ಕಾಲ್ನಡಿಗೆಯಲ್ಲಿ ಪ್ರಯಾಣ ಹೋದ ದಿನವೇ ಮಧ್ವನವಮಿ ಎಂದು ಆಚರಿಸಲಾಗುತ್ತಿದೆ. ಭಕ್ತಿಮಾರ್ಗದ ಪ್ರವರ್ತಕರಾದ ಮಧ್ವಾಚಾರ್ಯರು ಕನ್ನಡಲ್ಲಿ ದಾಸಪಂಥದ ಮಾರ್ಗ ಸಂಗೀತ ಕಲಾ ಪ್ರಕಾರದೊಡನೆ ಬೆಳೆಯಲು ಸ್ಪೂರ್ತಿಯಾದರು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

jk

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಆವರಣದಲ್ಲಿ ಮಧ್ವನವಮಿಯ ಅಂಗವಾಗಿ ಮಧ್ವನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯ ಪಾಜಕ ಗ್ರಾಮದ ಮಧ್ಯಗೇಹ ಭಟ್ಟ ಮತ್ತು ವೇದವತಿ ದಂಪತಿಗಳಿಗೆ ಜನಿಸಿದ ಆನಂದತೀರ್ಥರು ಪೂರ್ವಾಶ್ರಮದ ಬಳಿಕ ವಾಸುದೇವ ಮಧ್ವಾಚಾರ್ಯರಾಗಿ  13ನೇ ಶತಮಾನದಲ್ಲಿ ದ್ವೈತ ಮತದ ಸ್ಥಾಪಕರಾಗಿ ತತ್ವಜ್ಞಾನಿಗಳಾದರು ಎಂದು ಸ್ಮರಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಫೆಬ್ರವರಿ 28 ರಂದು ಸಿಂಧೂರ ಕನ್ವೆನ್ಷನ್ ಹಾಲ್ ನಲ್ಲಿ ವಿಪ್ರ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬ್ರಾಹ್ಮಣರ ಶ್ರೇಯೋಭಿವೃದ್ದಿಗಾಗಿ ಹಲವಾರು ಸಂಘಟಾನ್ಮಕ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ಕರತರಲಾಗುತ್ತಿದೆ.ಮೈಸೂರಿನ ಬ್ರಾಹ್ಮಣ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

Devotional-Way Promoter-Madhvacharya-Lawyer-S.A.Ramadas

ಇದೇ ಸಂದರ್ಭದಲ್ಲಿ ಮೈಸೂರು ಪೇಜಾವರ ಶ್ರೀ ವಿಶ್ವೇಶತೀರ್ಥ ಪ್ರಸನ್ನ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ವಿ.ರಾಜೀವ್,  ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ , ವಾಸುದೇವ್ ಭಟ್, ಯುವ ಮುಖಂಡ ಎನ್.ಎಂ.ನವೀನ್ ಕುಮಾರ್, ಪಾಲಿಕಾ ಸದಸ್ಯ ಮಾ.ವಿ.ರಾಮ್ ಪ್ರಸಾದ್,  ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಗೋಪಾಲ್ ರಾವ್, ಬ್ರಾಹ್ಮಣ ಯುವ ವೇದಿಕೆಯ ಗೌರವಾಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಂಗನಾಥ್  ಇತರರು ಉಪಸ್ಥಿತರಿದ್ದರು.

key words : Devotional-Way Promoter-Madhvacharya-Lawyer-S.A.Ramadas