“ಸಿಎಂ ಪಳನಿಸ್ವಾಮಿ ಒಬ್ಬ 420, ನೀವು ನಾಲಾಯಕ್ ಸಿಎಂ” : ಬಿ.ಎಸ್.ವೈ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ

ಮೈಸೂರು,ಫೆಬ್ರವರಿ,21,2021(www.justkannada.in) : ಸಿಎಂ ಪಳನಿಸ್ವಾಮಿ ಒಬ್ಬ 420. ಜಯಲಲಿತಾಗೆ ಕೈಕೊಟ್ಟ ,ಇಂದು ಎಲ್ಲರಿಗೂ ಕೈ ಕೊಡ್ತಿದ್ದಾನೆ. ಯಡಿಯೂರಪ್ಪನವರೇ ನಿಮ್ಮ ಗುಪ್ತಚರ ಇಲಾಖೆ ಏನ್ ಮಾಡ್ತಿದೆ. ನಿಮಗೆ ಮಾಹಿತಿ ಇಲ್ವ, ಆಗಾದ್ರೆ ನೀವು ನಾಲಾಯಕ್ ಸಿಎಂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶವ್ಯಕ್ತಪಡಿಸಿದ್ದಾರೆ.

jk

ತಮಿಳುನಾಡಿನಲ್ಲಿ ಕಾವೇರಿ ನೀರಾವರಿ ಯೋಜನೆ ಕಾಮಗಾರಿ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ಆರ್ಥಿಕ ನೆರವಿನಿಂದ 6941 ಕೋಟಿ ವೆಚ್ಚದಲ್ಲಿ ಹುಂಡಾರು, ವೈಗೈ ನದಿಗಳನ್ನ ಕಾವೇರಿಗೆ ಜೋಡಿಸಲು ಪಳನಿ ಸ್ವಾಮಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಇದು 118 ಕಿ.ಮೀಟರ್ ಉದ್ದದ ಕಾಲುವೆ ಮೂಲಕ ಗುಂಡಾರು ನದಿಗೆ ಜೋಡಣೆ ಮಾಡುತ್ತಿದ್ದಾರೆ ಎಂದರು.

ಆದರೆ, ನಮ್ಮಲ್ಲಿ ಮೇಕೆದಾಟು ಯೋಜನೆ ಮಾಡಿದ್ರೆ ವಿರೋಧ ಮಾಡುತ್ತಾರೆ. ಆದರೆ, ಯಡಿಯೂರಪ್ಪ ಬಿಜೆಪಿ ನಾಯಕರು ಏಕೆ ಧ್ವನಿ ಎತ್ತುತ್ತಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಈ ಯೋಜನೆಗೆ ಅಸ್ತು ಎಂದಿದ್ದಾರೆ ಎಂದು ಕಿಡಿಕಾರಿದರು.

ನಾಳೆ ಇಲ್ಲ ನಾಡಿದ್ದು ತಮಿಳುನಾಡು ಕರ್ನಾಟಕ ಬಂದ್

ಕರ್ನಾಟಕ ರಾಜ್ಯಕ್ಕೆ ಬೆಂಕಿ ಬೀಳುತ್ತಿದೆ. ತಮಿಳುನಾಡು ನೀರಾವರಿ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ನಾಳೆ ಇಲ್ಲ ನಾಡಿದ್ದು ತಮಿಳುನಾಡು ಕರ್ನಾಟಕ ಬಂದ್ ಮಾಡುತ್ತೀವಿ ಎಂದು ಎಚ್ಚರಿಕೆ ನೀಡಿದರು.

No off-line-test-Online-test-required-students-Vatal Nagaraj-protests

ಹೊಸೂರು ಕನ್ನಡಿಗರದ್ದು, ಅಲ್ಲಿ ಹೋರಾಟ ಮಾಡುತ್ತೀನಿ. ಇಂದಿನಿಂದ ತಮಿಳುನಾಡು, ಪಳನಿಸ್ವಾಮಿ, ಮೋದಿ ವಿರುದ್ದ ಹೋರಾಟ ಆರಂಭಿಸಲಾಗುವುದು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : CM Palaniswami-A 420-Nalaiak CM-B.S.Y-Vatal Nagaraj-outrage-against