Saturday, August 15, 2026

BDA Apartments

Home Front Page ಪಾಕಿಸ್ತಾನದ ಅಣ್ವಸ್ತ್ರ ಪಿತಾಮಹ, ಪರಮಾಣು ವಿಜ್ಞಾನಿ ಡಾ.ಅಬ್ದುಲ್ ಖದೀರ್ ಖಾನ್ ನಿಧನ

ಪಾಕಿಸ್ತಾನದ ಅಣ್ವಸ್ತ್ರ ಪಿತಾಮಹ, ಪರಮಾಣು ವಿಜ್ಞಾನಿ ಡಾ.ಅಬ್ದುಲ್ ಖದೀರ್ ಖಾನ್ ನಿಧನ

ಬೆಂಗಳೂರು, ಅಕ್ಟೋಬರ್ 10, 2021 (www.justkannada.in): ಪಾಕಿಸ್ತಾನದ ಅಣ್ವಸ್ತ್ರ ಪಿತಾಮಹ, ಪರಮಾಣು ವಿಜ್ಞಾನಿ ಡಾ. ಅಬ್ದುಲ್ ಖದೀರ್ ಖಾನ್ (85) ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇಸ್ಲಾಮಾಬಾದಿನ ಕೆಆರ್ ಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ವಿಜ್ಞಾನಿ ಡಾ. ಅಬ್ದುಲ್ ಖದೀರ್ ಖಾನ್ ನಿಧನಕ್ಕೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದಾರೆ.

1936ರಲ್ಲಿ ಭಾರತದ ಭೋಪಾಲ್‌ನಲ್ಲಿ ಜನಿಸಿದ ಎ.ಕೆ ಖಾನ್, ಭಾರತ-ಪಾಕ್ ವಿಭಜನೆಯ ನಂತರ 1947ರಲ್ಲಿ ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.

key words: Pakistan’s nuclear scientist Dr Abdul Qadeer Khan passes away