ತಾಯಿ ಮಗುವನ್ನು ಕೊಂದಿದ್ಧ ಆರೋಪಿಯ ಬಂಧನ.

ಬೆಂಗಳೂರು,ಅಕ್ಟೋಬರ್,11,2021(www.justkannada.in): ತಾಯಿ ಮತ್ತು ಮಗುವನ್ನ ಕೊಂದಿದ್ಧ ಆರೋಪಿಯನ್ನ ಬೆಂಗಳೂರಿನ ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ಬಂಧಿತ ಆರೋಪಿ. ಬೇಗೂರಿನ ಚಂದ್ರಕಲಾ ಮತ್ತು ಈಕೆಯ ಮಗುವನ್ನ ಕೊಂದ ಆರೋಪದಲ್ಲಿ ಪ್ರಶಾಂತ್ ನನ್ನ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್  ಚಂದ್ರಕಲಾಗೆ ಫೇಸ್ ಬುಕ್ ಫ್ರೆಂಡ್ ಆಗಿದ್ದನು. ಈ ಮಧ್ಯೆ ಚಂದ್ರಕಲಾ ಮನೆಗೆ  ಬಂದಿದ್ಧ ಪ್ರಶಾಂತ್ ಸುಸ್ತಾಗುತ್ತಿದೆ ಎಂದು ಹೇಳಿದ್ದನು. ಈ ವೇಳೆ ರೂಮ್ ನಲ್ಲಿ ಮಲಗಲು ಚಂದ್ರಕಲಾ ಸೂಚಿಸಿದ್ದು ಬಳಿಕ ಪ್ರಶಾಂತ್ ರೂಮ್ ನಲ್ಲಿ ಅರೆ ಬೆತ್ತಲೆಯಾಗಿ ಮಲಗಿದ್ದನು.ganja peddlers arrested by mysore police

ಇದನ್ನ ವಿಡಿಯೋ ಮಾಡಿಕೊಂಡಿದ್ಧ ಚಂದ್ರಕಲಾ ಹಣ ನೀಡುವಂತೆ ಪ್ರಶಾಂತ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಕೋಪಗೊಂಡ ಪ್ರಶಾಂತ್ ಚಂದ್ರಕಲಾಳನ್ನ ಹತ್ಯೆ ಮಾಡಿದ್ದನು. ನಂತರ ಮಗುವನ್ನೂ ಕೊಲೆ ಮಾಡಿದ್ಧ ಎನ್ನಲಾಗಿದೆ. ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Key words: Arrest – accused – killed – mother- child.