ರಾಜ್ಯಕ್ಕೆ ಹೆಚ್ಚಿನ ಕಂಪನಿಗಳ ಪ್ರವೇಶ, ಕೈಗಾರಿಕಾ ನೀತಿಗಳಲ್ಲಿ ಸಡಿಲ : ಸಚಿವ ಶಿವರಾಮ ಹೆಬ್ಬಾರ್
ಕೋಲಾರ,ಡಿಸೆಂಬರ್,28,2020(www.justkannada.in) : ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ನಿರ್ಮಿಸಲು ಸೂಕ್ತ ವಾತಾವರಣವಿದ್ದು, ರಾಜ್ಯಕ್ಕೆ ಹೆಚ್ಚಿನ ಕಂಪನಿಗಳು ಪ್ರವೇಶಿಸಲು ಕೈಗಾರಿಕಾ ನೀತಿಗಳನ್ನು ಸಡಲಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ವಿಸ್ಟ್ರಾನ್...
ಗೋಹತ್ಯೆ ನಿಷೇಧಕ ಕಾಯ್ದೆ, ಸುಗ್ರೀವಾಜ್ಞೆ ಮೂಲಕ ಜಾರಿಗೆ ಸರ್ಕಾರ ನಿರ್ಧಾರ : ಸಚಿವ ಪ್ರಭು ಚೌಹಾಣ್
ಬೆಂಗಳೂರು,ಡಿಸೆಂಬರ್,28,2020(www.justkannada.in) : ಗೋಹತ್ಯೆ ನಿಷೇಧಕ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಧಾನಸಭೆಯಲ್ಲಿ ಅಂಗೀಕಾರವಾಗಿ...
ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಸ್ತಂಭ ಸ್ಥಾಪನೆ : ಪೊಲೀಸರು ಮತ್ತು ಕನ್ನಡ ಪರ ಸಂಘಟನೆಗಳ ನಡುವೆ...
ಬೆಳಗಾವಿ,ಡಿಸೆಂಬರ್,28,2020(www.justkannada.in): ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಸಂಘಟನೆಗಳ ಹೋರಾಟಗಾರರು ಕನ್ನಡ ಧ್ವಜ ನೆಡಲು ಮುಂದಾಗಿದ್ದು, ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ವಾಗ್ವಾದ ನಡೆದಿದೆ.
ಕನ್ನಡಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆಯ...
ಆಸ್ತಿ ತೆರಿಗೆ ಹೆಚ್ಚಳ, ಹೊಸ ವರ್ಷಕ್ಕೆ ಜನರಿಗೆ ಬಿಗ್ ಶಾಕ್…!
ಬೆಂಗಳೂರು,ಡಿಸೆಂಬರ್,28,2020(www.justkannada.in) : ರಾಜ್ಯ ಸರ್ಕಾರದಿಂದ ಹೊಸ ವರ್ಷದಂದೇ, ಜನರಿಗೆ ಬಿಗ್ ಶಾಕ್ ನೀಡಲು ಮುಂದಾಗಿದೆ.ಆಸ್ತಿ ತೆರಿಗೆಯಲ್ಲಿ ಶೇ.15ರಿಂದ ಶೇ.30ರಷ್ಟು ಹೆಚ್ಚಳ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಈ ಮೂಲಕ...
ಗ್ರಾ.ಪಂ ಚುನಾವಣೆ: ನೂರಕ್ಕೆ ನೂರರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲೋದು ನಿಶ್ಚಿತ- ಸಿಎಂ ಬಿಎಸ್ ಯಡಿಯೂರಪ್ಪ…
ಬೆಂಗಳೂರು,ಡಿಸೆಂಬರ್,28,2020(www.justkannada.in): ಹಲವು ವಿದ್ಯಾವಂತರು ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿದ್ದಾರೆ. 100ಕ್ಕೆ ನೂರರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳು ಗೆಲ್ಲೋದು ನಿಶ್ಚಿತ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಿಎಂ...
ಸಾಲಬಾಧೆ ವಿಷ ಸೇವಿಸಿ ರೈತ ಆತ್ಮಹತ್ಯೆ..!
ಮೈಸೂರು,ಡಿಸೆಂಬರ್,28,2020(www.justkannada.in) : ಸಾಲಬಾಧೆಯಿಂದ ಖಿನ್ನತೆಗೆ ಒಳಗಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಕೃಷ್ಣಾಪುರದಲ್ಲಿ ನಡೆದಿದೆ.
ಮೃತ ರೈತ ಮಲ್ಲೇಶ್ ಗೌಡ(40) ಎಂದು ತಿಳಿದು ಬಂದಿದೆ. ಮಲ್ಲೇಶ್ ಗೌಡ ಖಾಸಗಿ...
ಗೋಹತ್ಯೆ ನಿಷೇಧ ವಿಚಾರ: ಪರಿಷತ್ ಸಭೆ ನಡೆಯದೇ ಇದ್ರೆ ಸುಗ್ರೀವಾಜ್ಞೆಗೆ ಚಿಂತನೆ- ಕಾನೂನು ಸಚಿವ ಮಾಧುಸ್ವಾಮಿ….
ಬೆಂಗಳೂರು,ಡಿಸೆಂಬರ್,28,2020(www.justkannada.in): ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸುವ ವಿಚಾರ ಕುರಿತು ಮಾತನಾಡಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಪರಿಷತ್ ಸಭೆ ನಡೆಯದೇ ಇದ್ದರೇ ಸುಗ್ರೀವಾಜ್ಞೆಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಗೋಹತ್ಯೆ ನಿಷೇಧ...
‘’ಹನುಮ ಜಯಂತಿ ತಾರೀಖು ನೋಡಿ ಮಾಡುವುದಿಲ್ಲ’’ : ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಎಸ್.ಎ.ರಾಮದಾಸ್ ತಿರುಗೇಟು…!
ಬೆಂಗಳೂರು,ಡಿಸೆಂಬರ್,28,2020(www.justkannada.in) : ಹನುಮ ಜಯಂತಿಯನ್ನು ತಾರೀಖು ನೋಡಿ ಮಾಡುವುದಿಲ್ಲ. ಅದನ್ನು ತಿಥಿ ನಕ್ಷತ್ರದ ಪ್ರಕಾರ ಮಾಡಲಾಗುತ್ತದೆ. ಹನುಮಂತನ ಜನ್ಮಸ್ಥಾನವಾದ ನಮ್ಮ ರಾಜ್ಯದಲ್ಲೇ ಹನುಮನ ಬಗ್ಗೆ ಅವಹೇಳನ ಸರಿಯೆ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವಿಟರ್...
ಆನ್ ಲೈನ್ ಆಪ್ ಮೂಲಕ ಸಾಲ ನೀಡಿ, ಮಾನಸಿಕ ಕಿರುಕುಳ : ಮೂವರು ಆರೋಪಿಗಳ ಬಂಧನ
ಬೆಂಗಳೂರು,ಡಿಸೆಂಬರ್,28,2020(www.justkannada.in) : ಆನ್ ಲೈನ್ ಆಪ್ ಗಳ ಮೂಲಕ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತ ಮಾನಸಿಕ ಹಿಂಸೆ ನೀಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಸೈಯದ್ ಅಹ್ಮದ್, ಸೈಯದ್ ಇರ್ಫಾನ್...
ಇಂದಿನಿಂದ ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ವಿಮಾನ…!
ಮೈಸೂರು, ಡಿಸೆಂಬರ್,28,2020(www.justkannada.in): : ಇಂದಿನಿಂದ ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ಇಂಡಿಗೋ ವಿಮಾನ ಹಾರಾಟ ಆರಂಭಗೊಳ್ಳಲಿದೆ.
ಇಂಡಿಗೋ ಸಂಸ್ಥೆ ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದ ತಾತ್ಕಾಲಿಕವಾಗಿ ಹಾರಾಟವನ್ನು ರದ್ದುಗೊಳಿಸಿತ್ತು. ಇದೀಗ ಮತ್ತೆ...



