Home Blog Page 3393

ಸಂಕಷ್ಟದಲ್ಲಿರುವ ಪತ್ರಕರ್ತರ ಕುಟುಂಬಕ್ಕೆ ನೆರವು ಮುಂದುವರಿಕೆ, ವಿವಿಗಳಲ್ಲಿ ಅಧ್ಯಯನ ಪೀಠ- ಸಿಎಂ ಬಿಎಸ್ ಯಡಿಯೂರಪ್ಪ…

0
ಬೆಂಗಳೂರು,ಫೆಬ್ರವರಿ,12,2021(www.justkannada.in):  ಕಾರ್ಯ ನಿರತ ಪತ್ರಕರ್ತರಾಗಿದ್ದು ಅನಾರೋಗ್ಯ ಅಥವಾ ಸಾವಿಗೆ ತುತ್ತಾದ ಸಂದರ್ಭದಲ್ಲಿ ಆ ಕುಟುಂಬಕ್ಕೆ  ಗರಿಷ್ಠ 5 ಲಕ್ಷ ರೂ. ನೀಡುತ್ತಿರುವ ನೆರವನ್ನು ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮ್ಮತಿಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ...

ರೈತಸ್ನೇಹಿ ತೋಟಗಾರಿಕೆ ಮೇಳ ಸಂಪನ್ನ: ಜನಸಾಗರದದ ನಡುವೆ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ತೆರೆ…

0
ಬೆಂಗಳೂರು,ಫೆಬ್ರವರಿ,12,2021(www.justkannada.in): ನಗರ ಹೊರವಲಯದ ಹೆಸರಘಟ್ಟದ ಸಸ್ಯಕಾಶಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ- ಐಐಎಚ್‌ಆರ್  ನಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ  ರಾಷ್ಟ್ರೀಯ ತೋಟಗಾರಿಕಾ ಮೇಳ  ಜನ ಸಾಗರದದ ನಡುವೆ ಶುಕ್ರವಾರ ತೆರೆಕಂಡಿತು. ಐದು ದಿನಗಳ ಮೇಳಕ್ಕೆ ರಾಜ್ಯ ಮತ್ತು ಹೊರರಾಜ್ಯಗಳೊಂದಿಗೆ ಲಕ್ಷಕ್ಕೂ ಅಧಿಕ ರೈತರು ಪಾಲ್ಗೊಂಡು ಮಾಹಿತಿ ಪಡೆದರು. ಬರೀ ರೈತರಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಹ ಭೇಟಿ ಕೊಟ್ಟು ತೋಟಗಾರಿಕೆಗಳ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮೇಳಕ್ಕೆ ಬಂದವರ ಪೈಕಿ, ಕೃಷಿಯಲ್ಲಿ ಆಸಕ್ತಿ ಉಳ್ಳವರು ತಾವಲ್ಲದೆ, ತಮ್ಮ ಮಕ್ಕಳನ್ನು ಕೂಡ ಮೇಳದಲ್ಲಿ ಪಾಲ್ಗೊಳಿಸಿ, ಬೆಳೆಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದ್ದು ವಿಶೇಷ. ಈ ಬಾರಿ ಮೇಳಕ್ಕೆ ಸ್ಥಳೀಯ ರೈತರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತಾದರೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ರೈತರು, ಯುವ ಕೃಷಿ ಉದ್ದಿಮೆಗಳು ಆಗಮಿಸಿದ್ದರು. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ ರೈತರು ಮೇಳಕ್ಕೆ ಭೇಟಿ ಕೊಟ್ಟಿದ್ದರು. ದೂರದ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಂದಲೂ ಜನರು ಬಂದಿದ್ದರು.  ಬಿಹಾರದಿಂದಲೂ ರೈತ ಕೂಟ ಭೇಟಿ ಈ ಬಾರಿ ಮೇಳ ವೀಕ್ಷಣೆಗೆ, ಬಿಹಾರದಿಂದಲೂ ರೈತರು ಆಗಮಿಸಿದ್ದರು. ಬಿಹಾರದ ಪಾಟ್ನಾ ಸಮೀಪದ ಹಳ್ಳಿಯೊಂದರ ರೈತ ಓಂಪ್ರಕಾಶ್ ಚೌತಾಲ ಮತ್ತು ಅವರ ಅಪ್ತಕೂಟ, ಈ ಮೇಳಕ್ಕೆ ಭೇಟಿಕೊಟ್ಟು ಮೇಳದ ಆಯೋಜನೆ ಕಂಡು ಖುಷಿಪಟ್ಟರು. ಐಐಎಚ್‌ಆರ್ ತಳಿಗಳ ಬಗ್ಗೆ ಮಾಹಿತಿ ಪಡೆದರು. ಲಕ್ಷ ಗಡಿದಾಟಿದ ನೋಂದಣಿ ದೇಶದ ಎಲ್ಲೆಡೆಯಿಂದ ರೈತರು, ತೋಟಗಾರಿಕೆ ಮೇಳಕ್ಕೆ ಆಗಮಿಸಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ೮೫ ಸಾವಿರಕ್ಕೂ ಹೆಚ್ಚು ಜನರು ಜನರು ನೋಂದಣಿ ಮಾಡಿಸಿಕೊಂಡು ಮೇಳವನ್ನು ವೀಕ್ಷಿಸಿದ್ದಾರೆ. ಒಟ್ಟಾರೆ, ಆನ್‌ಲೈನ್ ಮತ್ತು ಅಪ್‌ಲೈನ್ ನೋಂದಣಿ 15.5 ಲಕ್ಷ ದಾಖಲಾಗಿದೆ. ಮೇಳದ ಕೊನೆಯ ದಿನ ನೋಂದಣಿ ಬಿರುಸುಗೊಂಡಿತು. ಸಂಜೆಯವರೆಗೆ ಜನರು ಬರುತ್ತಲೇ ಇದ್ದರು. ಬರೀ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಮಾತ್ರ ಜನರು ಬಂದಿರಲಿಲ್ಲ. ಕರ್ನಾಟಕ ಮಾತ್ರಲ್ಲದೆ, ಹೊರರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ಈ ಬಾರಿ ಮೇಳದ ಪ್ರತ್ಯಕ್ಷ ವೀಕ್ಷಣೆಗೆ ರಾಜ್ಯದ ರೈತರಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ರೈತರು, ಯುವ ಕೃಷಿ ಉದ್ದಿಮೆಗಳು ಆಗಮಿಸಿದ್ದರು ಎಂದು ಐಐಎಚ್‌ಆರ್ ಪ್ರಧಾನ ವಿಜ್ಞಾನಿ ಹಾಗೂ ಮೇಳದ ನೋಂದಣಿ ಸಮಿತಿ ಮುಖ್ಯಸ್ಥ ಡಾ. ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು. ರೈತರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಮೇಳದ ಆರಂಭದ ಮುನ್ನ ದಿನ ಫೆಬ್ರವರಿ ೭ರಿಂದಲೇ ಬೇರೆ ಬೇರೆ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಂದ ಮೇಳಕ್ಕೆ ಬರುವಂತವರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಪ್ರಗತಿಪರ ರೈತರು, ಕೃಷಿ ಆಸಕ್ತರು, ವಿಜ್ಞಾನಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ, ಮೇಳದ ಮಳಿಗೆಗಳ ಮಾಲೀಕರು ಮತ್ತು ಸಹಾಯಕರಿಗೆ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಹೆಸರಘಟ್ಟದ ಟಿ.ಬಿ. ಕ್ರಾಸ್‌ನಲ್ಲಿ ಮೂರು ಕಲ್ಯಾಣ ಮಂಟಪಗಳು, ಐಐಎಚ್‌ಆರ್ ಹಾಸ್ಟಲ್, ಐಐಸಿಆರ್ ಗೆಸ್ಟ್‌ಹೌಸ್, ಜಿಕೆವಿಕೆಯ ಸುವರ್ವಭವನ, ರೈತ ತರಬೇತಿ ಕೇಂದ್ರದಲ್ಲಿ ವಸತಿಗೆ ಅನುವು ಮಾಡಿಕೊಡಲಾಗಿತ್ತು. ಗುಜರಾತ್, ಒಡಿಶಾ, ಪುದಚೇರಿ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಬಂದು ರೈತರು ವಾಸ್ತವ್ಯ ಹೂಡಿದ್ದರು. ಪ್ರತಿದಿನ ೪೦೦ರಿಂದ ೫೦೦ ಜನರ ವಾಸ್ತ್ಯವಕ್ಕೆ ನೆರವಾಗಲಾಗಿತ್ತು. ಐದಾರು ದಿನಗಳಿಂದ ಸರಿಸುಮಾರು ಮೂರರಿಂದ ಮೂರವರೆ ಸಾವಿರ ಮಂದಿಗೆ ವಸತಿ ಸೌಕರ್ಯ ಕಲ್ಪಿಸಿದ್ದು ವಿಶೇಷ ಎಂದು ಐಐಎಚ್‌ಆರ್ ಪ್ರಧಾನ ವಿಜ್ಞಾನಿ ಹಾಗೂ ಮೇಳದ ವಸತಿ ಸಮಿತಿ ಮುಖ್ಯಸ್ಥ ಡಾ. ಟಿ.ಎಂ. ಗಜಾನನ ಹೇಳಿದರು.   ನೂಕುನುಗ್ಗಲಿಲ್ಲದೆ ಸವಿ ಸವಿ ರುಚಿ.. ಐದು ದಿನಗಳ ಈ ಮೇಳದಲ್ಲಿ ಎಂದೂ ಕೂಡ ಊಟೋಪಚಾರಕ್ಕೆ ಜನರು ನೂಕು ನುಗ್ಗಲು ಕಾಣಬರಲಿಲ್ಲ. ಊಟ, ತಿಂಡಿ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಐಐಎಚ್‌ಆರ್ ಮಾಡಿತ್ತು. ಅತ್ಯಂತ ಕಡಿಮೆ ಬೆಲೆಗೆ ಪ್ರತಿದಿನವೂ ತುಂಬಾ ಸ್ವಾದೀಷ್ಟಕರ ತಿಂಡಿ ಮತ್ತು ಊಟವನ್ನು ನೀಡಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ತಿಂಡಿ ಒಂದೂವರೆ ಸಾವಿರ ಜನರಿಗೆ, ಊಟ ೭ರಿಂದ ೮ ಸಾವಿರ ಮಂದಿಗೆ ವ್ಯವಸ್ಥೆ ಮಾಡಲಾಗಿದ್ದು, ಅಡಿಕೆ ಹಾಳೆಯಲ್ಲಿ ತಿಂಡಿ ಮತ್ತು ಊಟವನ್ನು ನೀಡಲಾಗುತ್ತಿತ್ತು. ತಿಂಡಿಗೆ ಬಿಸಿಬೇಳೆಬಾತ್, ಟೊಮೊಟೊ ಬಾತ್, ತರಕಾರಿ ಪಲಾವು, ಗೀ ರೈಸ್, ಮೇತ್ಯಾ ಬಾತ್ ಹೀಗೆ ಬಗೆ ಬಗೆಯ ತಿಂಡಿಗಳನ್ನು ನೀಡಲಾಗುತ್ತಿತ್ತು. ಐದು ದಿನವೂ ಖಾಯಂ ಆಗಿ ಮೊಸರನ್ನ ಬಡಿಸಲಾಯಿತು. ಕಳೆದ ಬಾರಿ ತುಂಬಾ ನೂಕುನುಗ್ಗಲು ಇತ್ತು. ಆದರೆ, ಈ ಬಾರಿ ಎಲ್ಲೂ ಆ ದೃಶ್ಯಗಳು ಕಾಣಬರಲಿಲ್ಲ. ಬೆಳಗ್ಗೆ ೧೧.೩೦ರಿಂದ ಊಟ ಶುರುವಾದರೆ ಸಂಜೆ ೫.೩೦ರ ತನಕವೂ ನಡೆಯುತ್ತಿತ್ತು. ೧೦ ಕೌಂಟರ್‌ಗಳಿದ್ದವು. ಪ್ಲಾಸ್ಟಿಕ್ ಮುಕ್ತವಾಗಿತ್ತು. ತಿಂಡಿತಿನಿಸುಗಳನ್ನು ಸೇವಿಸಲು ಅಡಿಕೆ ಹಾಳೆ ಮತ್ತು ಸ್ಟೀಲ್ ಚಮಚಗಳ ವ್ಯವಸ್ಥೆ ಮಾಡಲಾಗಿತ್ತು. ಸುಮಾರು ೧೦೦ರಿಂದ ೧೫೦ ಜನ ಬಾಣಸಿಗರು, ಊಟೋಪಚಾರಕ್ಕೆ ಅನುವಾಗಿದ್ದರು. ಮೇಳದ ಹತ್ತಾರು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಐಐಎಚ್‌ಆರ್ ಪ್ರಧಾನ ವಿಜ್ಞಾನಿ ಮತ್ತು ಊಟೋಪಚಾರ ಸಮಿತಿ ಮುಖ್ಯಸ್ಥೆ ಡಾ. ಟಿ.ಆರ್. ರೂಪ ತಿಳಿಸಿದರು.  ಅದ್ಭುತ ಹಲಸು’ ಗೆ ಮುಗಿಬಿದ್ದ ಜನ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಳಿಗೆಗಳಲ್ಲಿ ಜನ ತುಂಬಿ ತುಳುಕಿತ್ತು. ಒಂದೂವರೆ ವರ್ಷದಲ್ಲಿ ಫಲಕೊಡುವ ’ ಅಧ್ಬುತ ಹಲಸು’ ಮಳಿಗೆಗೆ ಹೆಚ್ಚಿನ ಆಸಕ್ತರು ಮುಗಿಬಿದ್ದರು. ಶುಕ್ರವಾರ ಒಂದೇ ದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಲಸಿನ ಸಸಿಗಳು ಮಾರಾಟವಾಗಿವೆ. ಐದು ದಿನಗಳಲ್ಲಿ ೭ ಸಾವಿರ ಗಿಡಗಳನ್ನು ರೈತರು, ಆಸಕ್ತರು ಕೊಂಡುಕೊಂಡಿದ್ದಾರೆ. ಪುತ್ತೂರು ಮತ್ತು ತೈಲಾಂಡಿನ ಹಲಸಿನ ಸಸಿಗಳಿಗೆ ತುಂಬಾ ಬೇಡಿಕೆಯಿದೆ ಎಂದು ಮಳಿಗೆಯ ಮಾಲೀಕ ಜಾಕ್ ಅನಿಲ್ ಪುತ್ತೂರು ತಿಳಿಸಿದರು. Key words: Farmer's...

ಸಮಾಜ ಬದಲಾವಣೆ ಮಾಡಲು ಶಿಕ್ಷಣ ಬಿಟ್ಟರೆ ಬೇರೆ ಯಾವುದೇ ಮಾರ್ಗವಿಲ್ಲ- ಡಿಸಿಎಂ ಅಶ್ವಥ್ ನಾರಾಯಣ್….

0
ಮಂಡ್ಯ,ಫೆಬ್ರವರಿ,12,2021(www.justkannada.in): ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ತಳಹಂತದಿಂದ ಉನ್ನತ ಮಟ್ಟದವರೆಗೂ ಬದಲಾವಣೆಗಳನ್ನು ತರುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಶಿಕ್ಷಣ ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ...

ಐಷ್(AIISH) ನಲ್ಲಿ ಉಚಿತ ತಪಾಸಣಾ ಶಿಬಿರ

0
ಮೈಸೂರು,ಫೆಬ್ರವರಿ,12,2021(www.justkannada.in) :  ವಿಶ್ವಶ್ರವಣ ದಿನಾಚರಣೆ ಅಂಗವಾಗಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ಫೆ.14, 21 ಹಾಗೂ 28ರಂದು ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದೆ. ಫೆ.14ರ ಭಾನುವಾರ 18 ವರ್ಷಕ್ಕಿಂತ ಕಡಿಮೆ...

ವಾಹನ ಚಾಲಕರ ಜಾಗೃತಿ ಸೃಷ್ಟಿಸಿದ ವ್ಯಂಗ್ಯಚಿತ್ರ ಪ್ರದರ್ಶನ: ಡಿಸಿಎಂ ಲಕ್ಷ್ಮಣ್  ಸವದಿ ಚಾಲನೆ..

0
ಬೆಂಗಳೂರು,ಫೆಬ್ರವರಿ,12,2021(www.justkannada.in): ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಅಪರೂಪದ ವ್ಯಂಗ್ಯಚಿತ್ರ ಪ್ರದರ್ಶನ. ಆದರೆ ಇದು ಕೇವಲ ನಕ್ಕು ಹಗುರಾಗಿ ಮನೆಗೆ ಮರಳುವಂತಹ ಕಾರ್ಯಕ್ರಮವಾಗಿರಲಿಲ್ಲ. ಅಪಘಾತ ತಡೆಗೆ, ಸಂಚಾರ ಸುರಕ್ಷತೆಗೆ ಏನೆಲ್ಲಾ ಜಾಗ್ರತೆ ವಹಿಸಬೇಕು ಎಂಬ...

ಪೊಲೀಸರ ಕಠಿಣ ಶ್ರಮದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ- ಸಿಎಂ ಬಿಎಸ್ ವೈ ಶ್ಲಾಘನೆ…

0
ಬೆಂಗಳೂರು,ಫೆಬ್ರವರಿ,12,2021(www.justkannada.in):  ರಾಷ್ಟ್ರದ ಹಲವು ಕಡೆ ಸಮಸ್ಯೆ ಇದ್ದರೂ ಕೂಡ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಪೊಲೀಸರ ಕಠಿಣ ಶ್ರಮದಿಂದ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನಸೌಧ ಸಮ್ಮೇಳನ...

MLA Basanagouda Patil Yatnal gets notice from Central BJP Discipline Committee

0
New Delhi, Feb. 12, 2021 (www.justkannada.in): The BJP Disciplinary Committee has issued a notice to MLA Basanagouda Patil Yatnal, who is being often polemic...

Let Siddaramaiah stop speaking lightly and become mature: Former CM HDK

0
Bengaluru, Feb. 12, 2021 (www.justkannada.in): "By-elections are for those who have power and money. The way these by-elections are held is different. Anyone who...

3.19 ಕೋಟಿ ರೂ.ಗಳ ಸಿಸಿ ರಸ್ತೆ ಕಾಮಗಾರಿಗೆ ಡಿಸಿಎಂ ಗೋವಿಂದ ಕಾರಜೋಳ ಚಾಲನೆ…

0
ಬಾಗಲಕೋಟೆ,ಫೆಬ್ರವರಿ,12,2021(www.justkannada.in):  ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ತಿರುವು ರಸ್ತೆಗೆ ಸಿಮೆಂಟ್ ಕಾಂಕ್ರೆಟ್ ರಸ್ತೆ ನಿರ್ಮಾಣ ಹಾಗೂ ವಿದ್ಯುದ್ದೀಕರಣ ಕಾಮಗಾರಿಗೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು  ಶುಕ್ರವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಸಭೆಯ ವಿರೋಧ‌ಪಕ್ಷದ...

“ಪ್ರತ್ಯೇಕವಾಗಿ ಅಹಿಂದ ಹೋರಾಟದ ಅಗತ್ಯವಿಲ್ಲ” : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

0
ಬೆಂಗಳೂರು,ಫೆಬ್ರವರಿ,12,2021(www.justkannada.in)  : ಕಾಂಗ್ರೆಸ್ ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ಪಕ್ಷವಾಗಿದೆ. ಹೀಗಾಗಿ, ಪ್ರತ್ಯೇಕವಾಗಿ ಅಹಿಂದ ಹೋರಾಟದ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಹಿಂದ ಪರವಾಗಿಯೇ...