ಪೊಲೀಸರ ಕಠಿಣ ಶ್ರಮದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ- ಸಿಎಂ ಬಿಎಸ್ ವೈ ಶ್ಲಾಘನೆ…

ಬೆಂಗಳೂರು,ಫೆಬ್ರವರಿ,12,2021(www.justkannada.in):  ರಾಷ್ಟ್ರದ ಹಲವು ಕಡೆ ಸಮಸ್ಯೆ ಇದ್ದರೂ ಕೂಡ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಪೊಲೀಸರ ಕಠಿಣ ಶ್ರಮದಿಂದ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.jk

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಮಹಿಳೆಯರ ಸುರಕ್ಷತೆಯಲ್ಲಿ ರಾಜ್ಯ ಉತ್ತಮ ಸ್ಥಾನದಲ್ಲಿದೆ. ಭವಿಷ್ಯದಲ್ಲಿ ಸೈಬರ್ ಅಪರಾಧ ಬಹು ದೊಡ್ಡ ಸವಾಲಾಗಿದೆ. ಸಿಎಎನ್ ಪೊಲೀಸ್ ಠಾಣೆ , ಉಗ್ರಗಾಮಿ‌ ನಿಗ್ರಹ ದಳ ಸ್ಥಾಪಿಸಲಾಗಿದೆ. 10,134 ವಸತಿಯನ್ನು ನಿರ್ಮಾಣ ಮಾಡಲಾಗುತ್ತದೆ. ಇಆರ್ ಎಸ್ ಎಸ್ ಯೋಜನೆಯನ್ನು 419.7 ಕೋಟಿ ರೂ. ಅನುಷ್ಠಾನವಾಗಿದೆ. ಪೊಲೀಸ್ ಇಲಾಖೆಗೆ ಏನು ಸೌಲಭ್ಯ ಬೇಕು ಅದನ್ನು ಕೊಡಲು ಸಿದ್ಧರಿದ್ದೇವೆ. ಜನ ಸ್ವಾಭಿಮಾನದಿಂದ ಬದುಕುವುದು ಅಗತ್ಯ. ಹೀಗಾಗಿ ಇಲಾಖೆಯಲ್ಲಿ ಹೆಚ್ಚಿನ ಸುಧಾರಣೆ ತರುತ್ತೇವೆ ಎಂದು ಹೇಳಿದರು.

31.16 ಕೋಟಿ ಮೊತ್ತದದಲ್ಲಿ ಬೆಂಗಳೂರು ವಿಧಿವಿಜ್ಞಾನದ ಕೇಂದ್ರ ಉದ್ಘಾಟನೆ, ಪೊಲೀಸ್ ಕಾನ್ಸಟೇಬಲ್ ವಯೋಮಿತಿ 27 ವರ್ಷಕ್ಕೆ ಹೆಚ್ಚಳ ಮುಂತಾದ ಕ್ರಮಗಳನ್ನ ಕೈಗೊಳ್ಳಲಾಗಿದೆ. ಬರುವಂತಹ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಬೇಕಾದುದನ್ನ  ಕೊಡಲು ನಾವು ಸಿದ್ದವಿದ್ದೇವೆ. ಪೊಲೀಸ್ ಠಾಣೆಗೆ ಬರುವ ಜನರನ್ನ ಗೌರವದಿಂದ  ಬರಮಾಡಿಕೊಂಡು ವಿಚಾರಿಸಬೇಕು ಎಂದು ಪೊಲೀಸ್ ಸಿಬ್ಬಂದಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಕಿವಿಮಾತು ಹೇಳಿದರು.hard work - police - law and order - state – good-CM BS Yeddyurappa- Appreciation.

ಹಾಗೆಯೇ ಕರ್ನಾಟಕ ರಾಜ್ಯ ದೇಶದ ಅತೀ ಶಾಂತಿಯುತವಾದ ರಾಜ್ಯ. ಕಳೆದ ವರ್ಷದಲ್ಲಿ  ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ ಎಂಬುದು ಕಂಡು ಬಂದಿದೆ. ಮಹಿಳಾ ಮಕ್ಕಳ ಸುರಕ್ಷಣೆ ಸರ್ಕಾರದ ಆದ್ಯತೆ ಯಾಗಿದೆ. ಯಾವುದೇ ಘಟನೆ ನಡೆದ್ರು 24 ಗಂಟೆಯಲ್ಲಿ ತಪ್ಪಿತಸ್ಥರನ್ನ ಕಂಡುಹಿಡಿಯುತ್ತಿದ್ದಾರೆ ಎಂದು ಪೊಲೀಸರ ಕಾರ್ಯವನ್ನ ಸಿಎಂ ಬಿಎಸ್ ಯಡಿಯೂರಪ್ಪ ಶ್ಲಾಘಿಸಿದರು.

Key words: hard work – police – law and order – state – good-CM BS Yeddyurappa- Appreciation.