Thursday, August 13, 2026

BDA Apartments

Home Front Page ನಮ್ಮ 105 ಶಾಸಕರು ಹುಲಿಗಳು: ನಮ್ಮನ್ನ ಮುಟ್ಟುವ ಶಕ್ತಿ ಯಾರಿಗೂ ಇಲ್ಲ-ಶಾಸಕ ಕೆ.ಎಸ್ ಈಶ್ವರಪ್ಪ..

ನಮ್ಮ 105 ಶಾಸಕರು ಹುಲಿಗಳು: ನಮ್ಮನ್ನ ಮುಟ್ಟುವ ಶಕ್ತಿ ಯಾರಿಗೂ ಇಲ್ಲ-ಶಾಸಕ ಕೆ.ಎಸ್ ಈಶ್ವರಪ್ಪ..

ಶಿವಮೊಗ್ಗ,ಮೇ,28,5-2019(www.justkannada.in):  ಬಿಜೆಪಿಯ 105 ಶಾಸಕರೂ ಹುಲಿಗಳು. ನಮ್ಮನ್ನ ಮುಟ್ಟುವ ಶಕ್ತಿ ಯಾರಿಗೂ ಇಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಶಾಸಕ ಕೆ.ಎಸ್ ಈಶ್ವರಪ್ಪ ಟಾಂಗ್ ಕೊಟ್ಟರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಶಾಸಕ ಕೆ.ಎಸ್ ಈಶ್ವರಪ್ಪ, ಸರ್ಕಾರ ಬೀಳಿಸುವ ಪ್ರಯತ್ನ ಮಾಡುವುದಿಲ್ಲ ನಾವು ಆಪರೇಷನ್ ಕಮಲ ಮಾಡಲ್ಲ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ನಮ್ಮ ಯಾವ ಶಾಸಕರನ್ನೂ ಮುಟ್ಟುವ ಶಕ್ತಿ ಯಾರಿಗೂ ಇಲ್ಲ. ನಾವು 105 ಹುಲಿಗಳಿದ್ದಂಗೆ  ಎಂದರು.

ಮೈತ್ರಿ ಬೇಡ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಹೇಳೋರು, ಕೇಳೋರು ಯಾರು ಇಲ್ಲ. ಚುನಾವಣೆಗೆ ಹೋಗುವ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ  ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಜಿಂದಾಲ್ ನವರು ಸಾವಿರಾರು ಕೋಟಿ ಬಾಕಿ ಕೊಡಬೇಕಿದೆ. ಆದರೂ 3,666 ಎಕರೆ 30 ಕೋಟಿಗೆ ಮಾರಾಟ ಮಾಡಲು ಹೊರಟಿದ್ದಾರೆ.ಎಷ್ಟು ಆಗುತ್ತೋ.ಅಷ್ಟನ್ನು ದೋಚಿಕೊಂಡು ಹೋಗಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಕೆ.ಎಸ್ ಈಶ್ವರಪ್ಪ ಆರೋಪಿಸಿದರು.

Key words: Our 105 MLAs are Tiger: There is no power to touch us – MLA KS Easwarappa

#KSEaswarappa #Tiger #mla shivamogga