ಆಸ್ಕರ್ 2020: ‘ಪಾರಸೈಟ್’ ಅತ್ಯುತ್ತಮ ಚಿತ್ರ

ವಾಷಿಂಗ್ಟನ್, ಫೆಬ್ರವರಿ 10, 2020 (www.justkannada.in): ಬಹು ನಿರೀಕ್ಷಿತ 2020ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಪಾರಸೈಟ್ ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ನಿರ್ದೇಶಕ ಬಾಂಗ್ ಜೂನ್-ಹೊ ಈ ಬಾರಿಯ ಅತ್ಯುತ್ತಮ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

ಜೋಕರ್ ಚಿತ್ರದ ನಟನೆಗೆ ಜೊವಾಕ್ವಿನ್ ಫೀನಿಕ್ಸ್ ಅವರಿಗೆ ಅತ್ಯುತ್ತಮ ನಟ, ಜೂಡಿ ಚಿತ್ರದ ಅಭಿನಯಕ್ಕೆ ರೆನೀ ಜೆಲ್ವೆಗರ್ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.

ಈ ಬಾರಿ ಪಾರಸೈಟ್, 1917 ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ ಚಿತ್ರಗಳು ತಲಾ ಮೂರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿವೆ.ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಹಾಲಿವುಡ್ ನ ಬ್ರ್ಯಾಡ್ ಪಿಟ್ ಅವರಿಗೆ ‘ಒನ್ಸ್ ಅಪಾನ್ ಎ ಟೈಮ್..ಇನ್ ಹಾಲಿವುಡ್’ ಚಿತ್ರದಲ್ಲಿನ ಅಭಿನಯಕ್ಕೆ ಸಂದಿದೆ. ಮ್ಯಾರೇಜ್ ಸ್ಟೋರಿ ಚಿತ್ರದ ನಟನೆಗೆ ಲೌರಾ ಡೆರ್ನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬಾಂಗ್ ಜೂನ್ ಹೊ ಅವರ ‘ಪಾರಸೈಟ್’ ಗೆ ಉತ್ತಮ ಮೂಲ ಚಿತ್ರಕಥೆ ಪ್ರಶಸ್ತಿ ಸಂದಿದೆ. ಬ್ರ್ಯಾಡ್ ಪಿಟ್ ಅವರ ಮೊದಲ ಆಸ್ಕರ್ ಪ್ರಶಸ್ತಿ ಇದಾಗಿದೆ.

ಆಸ್ಕರ್ 2020ರ ಪ್ರಶಸ್ತಿ ವಿಜೇತರು:
ಮ್ಯಾರೇಜ್ ಸ್ಟೋರಿ ಚಿತ್ರದ ನಟನೆಗೆ ಲೌರಾ ಡೆರ್ನ್ ಗೆ ಅತ್ಯುತ್ತಮ ಪೋಷಕ ನಟಿ.
ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಬಾಂಗ್ ಜೂನ್ ಹೊ ಮತ್ತು ಹನ್ ಜಿನ್ ವೊನ್
ಟಾಯ್ ಸ್ಟೋರಿ 4ಗೆ ಅತ್ಯುತ್ತಮ ಅನಿಮೇಟೆಡ್ ಚಿತ್ರ.
ಫಾರ್ಡ್ ವಿಫೆರ್ರರಿ ಚಿತ್ರಕ್ಕೆ ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದ ಮೈಕೆಲ್ ಮೆಕ್ಕಸ್ಕರ್ ಮತ್ತು ಆಂಡ್ರ್ಯೂ ಬಕ್ಲ್ಯಾಂಡ್
1917 ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದ ರೊಗರ್ ಡೀಕಿನ್ಸ್
ಅತ್ಯುತ್ತಮ ಚಿತ್ರ ಸಂಕಲನ ಪ್ರಶಸ್ತಿ ಫಾರ್ಡ್ ವರ್ಸಸ್ ಫೆರ್ರರಿ
ಅತ್ಯುತ್ತಮ ಧ್ವನಿ ಮಿಶ್ರಣ ಪ್ರಶಸ್ತಿ ಮಾರ್ಕ್ ಟೈಲರ್ ಮತ್ತು ಸ್ಟುವಾರ್ಟ್ ವಿಲ್ಸನ್
ಅತ್ಯುತ್ತಮ ಸಾಕ್ಷ್ಯಚಿತ್ರ ಲರ್ನಿಂಗ್ ಟು ಸ್ಕೇಟ್ ಬೋರ್ಡ್ ಇನ್ ಎ ವಾರ್ ಜೋನ್ ಚಿತ್ರಕ್ಕೆ ಕರೋಲ್ ಡಿಸಿಂಗರ್ ಮತ್ತು ಎಲೆನಾ ಆಂಡ್ರೀಚೆವಾ
ಅತ್ಯುತ್ತಮ ಸಾಕ್ಷ್ಯಚಿತ್ರ ಅಮೆರಿಕನ್ ಫ್ಯಾಕ್ಟರಿ ಚಿತ್ರಕ್ಕೆ ಸ್ಟೀವನ್ ಬೊಗ್ನರ್, ಜೂಲಿಯಾ ರೀಚೆರ್ಟ್
ಸೌತ್ ಕೊರಿಯಾದ ‘ಪ್ಯಾರಸೈಟ್’ ಸಿನಿಮಾ ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ಸಿನಿಮಾವಾಗಿದೆ. ಹಾಲಿವುಡ್ ನಟ ಜಾಕ್ವಿನ್ ಫೀನಿಕ್ಸ್ ಅಭಿನಯದ ‘ಜೋಕರ್’ ಸಿನಿಮಾ 11 ವಿವಿಧ ವಿಭಾಗಗಳಲ್ಲಿ ನಾಮಾಂಕಿತಗೊಂಡಿತ್ತು. ಈ ಬಾರಿಗೆ ಈ ಸಿನಿಮಾವೇ ಅತಿ ಹೆಚ್ಚು ವಿಭಾಗದಲ್ಲಿ ನಾಮನಿರ್ದೇಶನ ಪಡೆದಿದೆ. ಭಾರತದಿಂದ ನಟ ರಣ್ವೀರ್ ಸಿಂಗ್ ಹಾಗೂ ಅಲಿಯಾ ಭಟ್ ನಟನೆಯ ‘ಗಲ್ಲಿ ಬಾಯ್’ ಅಧಿಕೃತ ಎಂಟ್ರಿ ಪಡೆದು ಅಂತಿಮ ಸುತ್ತಿನಲ್ಲಿ ಸ್ಪರ್ಧೆಯಿಂದ ಹೊರಬಂದಿತ್ತು.