‘ಜೋಕರ್’ ಜೋಕ್ವಿನ್ ಫೋನಿಕ್ಸ್’ಗೆ ಆಸ್ಕರ್ ಗರಿ !

ವಾಷಿಂಗ್ಟನ್, ಫೆಬ್ರವರಿ 10, 2020 (www.justkannada.in): ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಜೋಕರ್ ಸಿನಿಮಾದ ನಟ ಜೋಕ್ವಿನ್ ಫೋನಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಿನೀ ಝೆಲ್ಲ್ವೆಗೆರ್ ಈ ಬಾರಿಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಅತ್ಯುತ್ತಮ ಸಿನಿಮಾ: ಒನ್ಸ್ ಅಪೋನ್ ಎ ಟೈಮ್ ಇನ್ ಹಾಲಿವುಡ್

ದ ಐರಿಶ್ ಮ್ಯಾನ್ ಅಲ್ಲದೇ ದಕ್ಷಿಣ ಕೊರಿಯಾದ ಪ್ಯಾರಾಸೈಟ್ ಸಿನಿಮಾ ಬೆಸ್ಟ್ ಮೋಷನ್ ಪಿಕ್ಚರ್ ಆಫ್ ದ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಜತೆಗೆ ಪ್ಯಾರಾಸೈಟ್ ಸಿನಿಮಾದ ನಿರ್ದೇಶಕ ಬೊಂಗ್ ಜೂನ್ ಹೋ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಒನ್ಸ್ ಅಪೋನ್ ಎ ಟೈಮ್ ಚಿತ್ರದ ಅಭಿನಯಕ್ಕಾಗಿ ಬ್ರಾಡ್ ಪಿಟ್ ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿದೆ.
ರೋಜರ್ ಡೀಕೆನ್ಸ್ ಅವರಿಗೆ 1917 ಚಿತ್ರದ ಛಾಯಾಗ್ರಹಣಕ್ಕಾಗಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮ್ಯಾರೇಜ್ ಸ್ಟೋರಿ ನಟಿ ಲೌರಾ ಡೆರ್ನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.