Saturday, August 15, 2026

BDA Apartments

Home Front Page ಅಧಿವೇಶನ ಮುಗಿದರೂ ವಿಪಕ್ಷ ನಾಯಕನ ಆಯ್ಕೆ ವಿಳಂಬ: ಬಿಜೆಪಿಗೆ ಕುಟುಕಿದ ಸಚಿವ ಈಶ್ವರ್ ಖಂಡ್ರೆ.

ಅಧಿವೇಶನ ಮುಗಿದರೂ ವಿಪಕ್ಷ ನಾಯಕನ ಆಯ್ಕೆ ವಿಳಂಬ: ಬಿಜೆಪಿಗೆ ಕುಟುಕಿದ ಸಚಿವ ಈಶ್ವರ್ ಖಂಡ್ರೆ.

ಬೆಂಗಳೂರು,ಜುಲೈ,22,2023(www.justkannada.in):  ಅಧಿವೇಶನ ಮುಗಿದರೂ ವಿಪಕ್ಷ ನಾಯಕನ ಆಯ್ಕೆ ವಿಳಂಬ ಕುರಿತು ಪ್ರತಿಕ್ರಿಯಿಸಿ ಬಿಜೆಪಿಗೆ ಸಚಿವ ಈಶ್ವರ್ ಖಂಡ್ರೆ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬಿಜೆಪಿ 4 ವರ್ಷಗಳ ಆಡಳಿತದಲ್ಲೂ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಅವಧಿಯಲ್ಲಿ ಜನರ ನಿರೀಕ್ಷೆ, ಅಪೇಕ್ಷೆಗಳು ಮಣ್ಣುಪಾಲಾಗಿವೆ. ಪ್ರತಿಪಕ್ಷ ಸ್ಥಾನದಲ್ಲೂ ಬಿಜೆಪಿ ಸಂಪೂರ್ಣವಾಗಿ ವಿಫಲವಾಗುತ್ತಿದೆ. ಬಿಜೆಪಿಯವರು ಬೇರೆ ಏನ್ ಹೇಳುತ್ತಾರೆ, ಅವರಿಗೆ ಏನು ನೈತಿಕತೆ ಇದೆ. 3 ವಾರ ಸದನ ನಡೆದರೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗಿಲ್ಲ ಎಂದು ಚಾಟಿ ಬೀಸಿದರು.

ಬಿಜೆಪಿಯವರು ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡಿದ್ದರು. ಅಕ್ರಮ, ಅವ್ಯವಹಾರ ಮಾಡಿ ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿ ಮಾಡಲಾಗಿತ್ತು ಈಗ ಜನ ಪಾಠ ಕಲಿಸಿದ್ದಾರೆ, ಈಗಲಾದರೂ  ಬಿಜೆಪಿಯವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪ್ರತಿಪಕ್ಷದಲ್ಲಿ ಇದ್ದುಕೊಂಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸಲಹೆ ನೀಡಿದರು.

Key words: opposition leader – delay-  Minister- Ishwar Khandre – BJP.