ಚಾಣಕ್ಯ ವಿವಿಗೆ ವಿರೋಧ: ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿ ನೀಡಲು ಒಪ್ಪಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು,ಸೆಪ್ಟಂಬರ್,22,2021(www.justkannada.in): ಚಾಣಕ್ಯ ವಿವಿ ವಿಧೇಯಕ ಅಂಗೀಕಾರಕ್ಕೆ  ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ರಾಜ್ಯ ಸರ್ಕಾರದ ವಿರುದ್ಧ  ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ   ನಡೆಸಿದ ಬಳಿಕ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಹ ಹರಿಹಾಯ್ದಿದ್ದಾರೆ.

ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಾಣಕ್ಯ ವಿವಿಗಾಗಿ 116 ಎಕರೆ ಭೂಮಿಯನ್ನು ನೀಡಲಾಗಿದೆ. 1 ಎಕರೆ ಭೂಮಿ 3-4 ಕೋಟಿ ಬೆಲೆ ಬಾಳುತ್ತೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.  ಸಿದ್ದರಾಮಯ್ಯಗೆ ಆ ಲ್ಯಾಂಡ್ ಬಗ್ಗೆ ಅಷ್ಟು ನಾಲೆಡ್ಜ್ ಇಲ್ಲ.  1 ಎಕರೆ ಭೂಮಿ 7-10 ಕೋಟಿ ರೂಪಾಯಿ ಬೆಲೆ ಬಾಳುತ್ತೆ. ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿ ನೀಡಲು ಒಪ್ಪಲ್ಲ. ಕಮರ್ಷಿಯಲ್ ಜಾಗವನ್ನು ವಿವಿಗೆ ನೀಡುವುದು ಒಪ್ಪಲ್ಲ. ಕಲುಬುರಗಿ, ವಿಜಯಪುರ ಕಡೆ ಭೂಮಿ ಬೇಕಿದ್ದರೆ ಕೊಡಲಿ. ದೇವನಹಳ್ಳಿ ಬಳಿಯಿರುವ ಜಾಗ ನೀಡುವುದಕ್ಕೆ ನಾವು ಒಪ್ಪಲ್ಲ. ಈ ಜಾಗ ಹೆಚ್ಚು ಬೆಲೆಬಾಳುತ್ತೆ, ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಅಂತಹ ಜಾಗವನ್ನು ನೀಡುವುದಕ್ಕೆ ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ಹೇಳಿದರು.

ನಾನು ಶಿಕ್ಷಣ ಸಂಸ್ಥೆ ನಡೆಸುತ್ತೇನೆ. ರಾಮಯ್ಯ, ಪಿಇಎಸ್ ಸೇರಿ ಹಲವರು ನಡೆಸುತ್ತಾರೆ. ಇಂತಹ ಸಂಸ್ಥೆಗಳು ಖಾಸಗಿ ವಿವಿಗೆ ಮಾಡಲು ಅರ್ಹ. ಯಾರೋ 10 ಜನ ಸೇರಿ ಟ್ರಸ್ಟ್ ಮಾಡಿದರೆ ಅವಕಾಶವಿಲ್ಲ. ಭೂಮಿ ಕೊಡ್ತಾರೆ, ಹಣ ಕೊಡ್ತಾರೆ ಅಂತ ಅವಕಾಶ ಕೊಡಲಾಗಲ್ಲ. ಸಿದ್ದರಾಮಯ್ಯನವರಿಗೆ ಮಾಹಿತಿಯಿಲ್ಲ. ದೇವನಹಳ್ಳಿ ಬಳಿ ಭೂಮಿ 10 ಕೋಟಿ ಬೆಲೆ ಬಾಳುತ್ತೆ. ಮಾಗಡಿಯಲ್ಲೂ ಬೇರೆ ಕಡೆ ಭೂಮಿ ಕೊಡಲಿ. ಒಂದು ವಿವಿ ತೆಗೆಯಲು ಅವರಿಗೆ ಅರ್ಹತೆಯಿಲ್ಲ. ಇಲ್ಲಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಕಿಡಿಕಾರಿದರು.

Key words: Opposition – Chanakya university-KPCC president- DK Shivakumar