ಯದುವೀರ್ ಆಸ್ತಿ: ಕೋಟ್ಯಾಧೀಶ್ವರನಾದರೂ ಓಡಾಡೋಕೆ ಸ್ವಂತ ಕಾರು, ಸ್ವಂತ ಬೈಕ್ ಇಲ್ಲ.

ಮೈಸೂರು,ಏಪ್ರಿಲ್, 1,2024 (www.justkannada.in): ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೋಟ್ಯಾಧೀಶ್ವರ. ಯದುವೀರ್, ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್ ತಾಯಿಗಿಂತಲೂ ಸಿರಿವಂತ.  ಯದುವೀರ್ ಹೆಸರಿನಲ್ಲಿ ಸ್ವಂತ ವಾಹನ ಅಥವಾ ಸ್ಥಿರಾಸ್ತಿ ಇಲ್ಲ. ಯದುವೀರ್ ಬಳಿ ಯಾವುದೇ ಕೃಷಿಭೂಮಿ , ಸ್ವಂತಮನೆ ಹೊಂದಿಲ್ಲ, ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್ ಗಳಲ್ಲಿ ಸಾಲ ಪಡೆದಿಲ್ಲ. ಯದುವೀರ್ ವಿರುದ್ದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಯದುವೀರ್ ಒಟ್ಟು 4 ಕೋಟಿ 99 ಲಕ್ಷದ 59 ಸಾವಿರದ 303 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಯಾವುದೇ ಸ್ಥಿರಾಸ್ತಿ ಹೊಂದಿಲ್ಲ.

ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವ ಮೈಸೂರು ರಾಜವಂಶದ ಉತ್ತರಾಧಿಕಾರಿ ಯದುವೀರ್ ಇಂದು ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರುವ ಯದುವೀರ್ ನಾಮಪತ್ರ ಸಲ್ಲಿಕೆ ವೇಳೆ ತಾಯಿ ಪ್ರಮೋದಾದೇವಿ ಒಡೆಯರ್ ಜೊತೆಗಿದ್ದರು.

ಅಫಿಡವಿಟ್ ವಿವರ.

ನಾಮಪತ್ರ ಸಲ್ಲಿಕೆ ವೇಳೆ ಯದುವೀರ್ ಸಲ್ಲಿಸಿರುವ ಅಫಿಡವಿಟ್ ನ ವಿವರ ಹೀಗಿದೆ.

ಯದುವೀರ್ ಕೈಯಲ್ಲಿ ನಗದು 1ಲಕ್ಷ ರೂ. ಹಣವಿದ್ದರೇ ಮಡದಿ ತ್ರಿಷಿಕಾ ಕೈಯಲ್ಲಿ 75 ಲಕ್ಷ ರೂ.ಗಳಿವೆ.

ವಿವಿಧ ಬ್ಯಾಂಕ್ ಗಳ ಉಳಿತಾಯ ಖಾತೆಯಲ್ಲಿ ಯದುವೀರ್ ಹೆಸರಿಗೆ 23 ಲಕ್ಷದ 55 ಸಾವಿರ ನಗದು ಹಣವಿದ್ದರೆ ಮಡದಿ ತ್ರಿಷಿಕಾ ಹೆಸರಲ್ಲಿ  1 ಲಕ್ಷ ಬ್ಯಾಂಕ್ ಡೆಪಾಸಿಟ್ ಇಡಲಾಗಿದೆ.

ವಿವಿಧ ಕಂಪನಿ ಹಾಗೂ ಶೇರ್ ಗಳ ಮೇಲೆ ಹೂಡಿಕೆ ಮಾಡಿರುವ ವಿವರ ಹೀಗಿದೆ.

ಯದುವೀರ್ ಹೆಸರಿನಲ್ಲಿ  1ಕೋಟಿ 33 ಲಕ್ಷದ 4 ಸಾವಿರ 303 ರೂ. ಹೂಡಿಕೆ ಮಾಡಲಾಗಿದ್ದರೇ ಮಗನ ಹೆಸರಿನಲ್ಲಿ 1 ಕೋಟಿ, 49 ಲಕ್ಷದ 343 ರೂ. ಹೂಡಿಕೆ ಮಾಡಲಾಗಿದೆ.

ಚಿನ್ನ ಬೆಳ್ಳಿ ವಿವರ..

ಯದುವೀರ್ ಹೆಸರಿನಲ್ಲಿ 3ಕೋಟಿ 25 ಲಕ್ಷ ರೂ. ಮೌಲ್ಯದ  4 ಕೆ.ಜಿ ಚಿನ್ನವಿದೆ.  ಮಡದಿ ತ್ರಿಷಿಕಾ ಹೆಸರಿನಲ್ಲಿ 90 ಲಕ್ಷದ ಮೌಲ್ಯದ ಚಿನ್ನ ಹಾಗೂ 5.5 ಲಕ್ಷ ಮೌಲ್ಯದ ಚಿನ್ನದ ಗಟ್ಟಿ, ಪುತ್ರನ ಹೆಸರಿನಲ್ಲಿ 12 ಲಕ್ಷದ ಚಿನ್ನ ಹಾಗೂ 5.5 ಲಕ್ಷದ ಚಿನ್ನದ ಗಟ್ಟಿ ಇದೆ.

ಯದುವೀರ್ ಹೆಸರಿನಲ್ಲಿ 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿ ಇದ್ದರೇ ಮಡದಿ ಹೆಸರಿನಲ್ಲಿ 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ, ಹಾಗೂ ಮಗನ ಹೆಸರಿನಲ್ಲಿ 7 ಲಕ್ಷ ರೂ. ಮೌಲ್ಯದ 10 ಕೆ.ಜಿ ಬೆಳ್ಳಿ ಇವೆ.

ಒಟ್ಟಾರೇ, ಯದುವೀರ್ ಹೆಸರಿನಲ್ಲಿ 3 ಕೋಟಿ 33 ಲಕ್ಷ ರೂ., ಮಡದಿ ಹೆಸರಿನಲ್ಲಿ 1 ಕೋಟಿ ಹಾಗೂ ಮಗನ ಹೆಸರಿನಲ್ಲಿ 20 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಿವೆ.

ಒಟ್ಟ ಆಸ್ತಿಯ ವಿವರ..

ಯದುವೀರ್ ಹೆಸರಿನಲ್ಲಿ 4 ಕೋಟಿ 99 ಲಕ್ಷದ 59 ಸಾವಿರದ 303 ರೂ., ಮಡದಿ ತ್ರಿಷಿಕಾ ಹೆಸರಿನಲ್ಲಿ 1 ಕೋಟಿ 4 ಲಕ್ಷದ 25 ಸಾವಿರ ರೂ. ಹಾಗೂ ಪುತ್ರನ ಹೆಸರಿನಲ್ಲಿ 3 ಕೋಟಿ 63 ಲಕ್ಷದ 55 ಸಾವಿರದ 343 ರೂ. ಹೊಂದಿದ್ದಾರೆ.

Key words: Mysore, Yaduveer, property