ಮೈಸೂರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ: ಏಕಕಾಲದಲ್ಲಿ ಏಳು ಕಡೆಗಳಲ್ಲಿ ದಾಳಿ, ಪರಿಶೀಲನೆ.

ಮೈಸೂರು,ಅಕ್ಟೋಬರ್,21,2022(www.justkannada.in):  ಮೈಸೂರು ಲೋಕಾಯುಕ್ತ ಪೊಲೀಸರು  ಕಾರ್ಯಾಚರಣೆ ನಡೆಸಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಏಕಕಾಲದಲ್ಲಿ ಏಳು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರಿಂದ  ದಾಳಿಯಾಗಿದೆ.  ಸಣ್ಣ ನೀರಾವರಿ ಇಲಾಖೆ ಜೆಇ‌ ರಫೀಕ್ ಮನೆ ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಮೂರು ಕಡೆಗಳಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.  ರಫೀಕ್ ಮಡಿಕೇರಿಯ ಸಣ್ಣ ನೀರಾವರಿ ಇಲಾಖೆಯಲ್ಲಿ ಜೆಇ ಆಗಿದ್ದಾರೆ.

ಮಡಿಕೇರಿ ‌ಪಿಡಬ್ಲ್ಯೂಡಿ ಇಇ ನಾಗರಾಜ್ ಮನೆ ಮೇಲೂ ದಾಳಿಯಾಗಿದ್ದು, ಮೈಸೂರಿನಲ್ಲಿರುವ ನಿವಾಸದಲ್ಲಿ  ಲೋಕಾಯುಕ್ತ ಪೊಲಿಸರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೆಯೇ ಕುಶಾಲನಗರ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಮನೆ ಮೇಲೂ ದಾಳಿಯಾಗಿದೆ. ಇನ್ಸ್ ಪೆಕ್ಟರ್ ಮಹೇಶ್  ಇಂಟೆಲಿಜೆನ್ಸಿ‌‌ ವಿಭಾಗಕ್ಕೆ‌ ವರ್ಗಾವಾದರೂ ಹೋಗದೆ ಇದ್ದರು ಎನ್ನಲಾಗಿದೆ.

ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿಯಾಗಿದ್ದು, ಡಿವೈಎಸ್ ಪಿ ಮಾಲತೇಶ್, ಪವನ್, ಸಣ್ಣ ತಮ್ಮಪ್ಪ ಒಡೆಯರ್, ಕೃಣ್ಣಯ್ಯ ನಾಲ್ವರು ಡಿವೈಎಸ್ ಪಿ

ಇನ್ಸ್ ಪೆಕ್ಟರ್ ಲೋಕೇಶ್ವರ,  ರವಿಕುಮಾರ್, ಶಶಿಕುಮಾರ್, ಉಮೇಶ್, ಜಯರತ್ನ, ರೂಪಶ್ರೀ‌ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Key words: Operation – Mysore –Lokayukta- Police-raid

ENGLISH SUMMARY…

Mysuru Lokayukta Police conducts raids simultaneously at seven different places
Mysuru, October 21, 2022 (www.justkannada.in): The Mysuru Lokayukta Police today raided the residences of various government officers and are inspecting the documents.
The Lokayukta Police conducted raids simultaneously at seven places in Mysuru, on the residences of Minor Irrigation Department Junior Engineer Rafeeq and his relatives. Verification of documents is still going on. Rafeeq is serving as Junior Engineer in the Minor Irrigation Department in Madikeri.
The police also raided the residence of Madikeri PWD EE Nagaraj, in Mysuru and are inspecting. The residence of Kushalnagara Police Inspector is also raided. It is alleged that Inspector Mahesh has continued in the same position though he has been transferred to the Intelligence wing.
The raids are conducted under the leadership of Mysuru Lokayukta SP Suresh Babu, DySP P. Malatesh, Pavan, Sanna Tamappa Wadiyar, Krishnaiah.
Keywords: Mysuru Lokayukta/ Raid/ seven places