ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್  ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಶಾಸಕ ಜಿ.ಟಿ ದೇವೇಗೌಡ…?

ಮೈಸೂರು,ಅಕ್ಟೋಬರ್,21,2022(www.justkannada.in):  ಜೆಡಿಎಸ್ ಜೊತೆ ಮುನಿಸಿಕೊಂಡು ಪಕ್ಷದ ತೊರೆಯಲು ಮುಂದಾಗಿದ್ಧ ಶಾಸಕ ಜಿಟಿ ದೇವೇಗೌಡರನ್ನ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಖುದ್ಧು ಅಖಾಡಕ್ಕಿಳಿದು ಮನವೊಲಿಸಿದ್ದಾರೆ.

ಈ ಮಧ್ಯೆ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನಡೆಸಿದ ಸಂದಾನ ಯಶ್ವಸಿಯಾಗಿದ್ದು ಜಿಟಿ ದೇವೇಗೌಡರು ಜೆಡಿಎಸ್ ನಲ್ಲೇ ಉಳಿದಿದ್ದಾರೆ. ಇನ್ನೂ ಮೈಸೂರು ಚುನಾವಣಾ ಉಸ್ತುವಾರಿಯನ್ನ ಜಿ.ಟಿ ದೇವೇಗೌಡರಿಗೆ ನೀಡಲಾಗಿದೆ.

ಈ ನಡುವೆ ಇಂದು ಚಾಮುಂಡಿ ಬೆಟ್ಟದಲ್ಲಿ ಶಾಸಕ ಜಿ.ಟಿ ದೇವೇಗೌಡರು ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ್ದಾರೆ ಎನ್ನಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡರು,  ಹುಣಸೂರು ಕ್ಷೇತ್ರದಿಂದ ಹರೀಶ್ ಗೌಡ, ಕೆಆರ್ ನಗರ ಶಾಸಕ ಸಾ.ರಾ ಮಹೇಶ್.  ಪಿರಿಯಾಪಟ್ಟಣ ಕೆ.ಮಹದೇವ್ , ಟಿ.ನರಸೀಪುರದಿಂದ  ಅಶ್ವಿನ್,  ಹೆಚ್.ಡಿ ಕೋಟೆಯಿಂದ ಜಯಪ್ರಕಾಶ್  ಸ್ಪರ್ಧೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Key words:  MLA-GT Deve Gowda -announced – list – JDS candidates – Mysore constituencies

ENGLISH SUMMARY…

JDS MLA G.T. Devegowda announces list of probable JDS candidates from Mysuru region
Mysuru, October 21, 2022 (www.justkannada.in): JDS supremo and former Prime Minister H.D. Devegowda yesterday met JDS leader G.T. Devegowda to convince him to continue in the party and has been successful.
As a result of this, G.T. Devegowda has announced he will continue in JDS. The party has given responsibility of Mysuru incharge to him. G.T. Devegowda announced the list of candidates from the JDS party who will contest in the forth coming assembly elections in Mysuru District.
It is said that while G.T. Devegowda will contest from Chamundeshwari constituency, Harish Gowda will contest from Hunsur, Sa.Ra. Mahesh from K.R. Nagara, K. Mahadev from Periyapatna, Ashwin from T. Narasipura, Jayaprakash from H.D. Kote.
Keywords: JDS/ G.T. Devegowda/ elections/ candidates probable list/ announce