ಮೈಸೂರಿನ ಸಿಎಫ್ ಟಿಆರ್ ಐ ನಲ್ಲಿ ಓಪನ್ ಡೇ, ವಸ್ತು ಪ್ರದರ್ಶನ: ಹಲವು ವಿಶೇಷತೆಗಳನ್ನ ಕಣ್ತುಂಬಿಕೊಂಡ ಶಾಲಾ ಮಕ್ಕಳು.

ಮೈಸೂರು,ಜುಲೈ,6,2023(www.justkannada.in): ಮೈಸೂರಿನ ಸಿಎಫ್ ಟಿ ಆರ್ ಐ ನಲ್ಲಿ ಎರಡು ದಿನಗಳ ಕಾಲ ಓಪನ್ ಡೇ, ಶಾಲಾ ಕಾಲೇಜು ಮಕ್ಕಳಿಗೆ ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು, ನಗರದ ವಿವಿಧ ಶಾಲಾ ಕಾಲೇಜಿನ ಸಹಸ್ರಾರು ಮಕ್ಕಳು ವಸ್ತು ಪ್ರದರ್ಶನ ವೀಕ್ಷಣೆ ಅಲ್ಲಿನ ವಿಶೇಷತೆಗಳನ್ನ ನೋಡಿ ಕಣ್ತುಂಬಿಕೊಂಡರು.

ಸಿ.ಎಫ್.ಟಿ.ಆರ್.ಐ ಕೇಂದ್ರದಲ್ಲಿ ನಡೆಯುವ ಆಹಾರ ತಯಾರಿಕಾ ಪ್ರಕ್ರಿಯೆ ಮತ್ತು ವೈಜ್ಞಾನಿಕ ಆಹಾರ ಸಂಶೋಧನಾ ಪ್ರಯೋಗ ಶಾಲೆಯ ವಿಶೇಷತೆಗಳನ್ನ ಶಾಲಾ ಕಾಲೇಜಿನ ಮಕ್ಕಳು ಮತ್ತು ಶಿಕ್ಷಕರು ವೀಕ್ಷಿಸಿದರು.

ಒನ್ ಲ್ಯಾಬ್ ಒನ್ ವೀಕ್ ಕಾರ್ಯಕ್ರಮದಡಿ  ಸಿ.ಎಫ್.ಟಿ.ಆರ್.ಐ ಕ್ಯಾಂಪಸ್ ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ವೀಕ್ಷಿಣೆಗೆ ಇಂದು ಮತ್ತು ನಾಳೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಆಹಾರ ಸಂಶೋಧನಾ ಕೇಂದ್ರದಲ್ಲಿ ನಡೆಯುವ ಪ್ರಕ್ರಿಯೆಗಳ ಕಣ್ಣಾರೆ ಕಂಡು ಶಾಲಾ ಮಕ್ಕಳು ಖುಷಿಪಟ್ಟರು.

ಇಲ್ಲಿ ಸಾಮಾನ್ಯವಾಗಿ ಯಾರಿಗು ಮುಕ್ತ ಅವಕಾಶ ಅನ್ನೋದೆ ಇಲ್ಲ. ಇಂದಿನಿಂದ ನಮಗೆ ಅವಕಾಶ ಮಾಡಿಕೊಟ್ಟಿರುವುದು ಬಹಳ ಉಪಯುಕ್ತವಾಗಿದೆ. ಇದರಿಂದ ಶಾಲಾ ಮಕ್ಕಳಿಗೆ  ಸಾಕಷ್ಟು ಉಪಯುಕ್ತ ಮಾಹಿತಿ ಸಿಗುತ್ತದೆ. ಇಲ್ಲಿ ನಡೆಯುವ ಜೈವಿಕ ತಂತ್ರಜ್ಞಾನ ಕುರಿತ ಪ್ರಕ್ರಿಯೆಗಳು ಬಹಳಷ್ಟು ಉಪಯೋಗವಾಗುತ್ತದೆ. ಆದರೆ, ಕೇವಲ ಎರಡು ದಿನಗಳು ಮಾತ್ರ ಅವಕಾಶ ಮಾಡಿಕೊಟ್ಟಿರುವುದು ಸಾಕಾಗುವುದಿಲ್ಲ. ಇನ್ನಷ್ಟು ದಿನಗಳ ಕಾಲ ಅವಕಾಶ ಮಾಡಿಕೊಟ್ಟಿದ್ದರೆ ನಗರದ ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಬಂದು ನೋಡಬಹುದಿತ್ತು. ಆದರೆ,ಕಾಲಾವಕಾಶ ಬಹಳ ಕಡಿಮೆ ಇದೆ. ಮತ್ತಷ್ಟು ಕಾಲಾವಕಾಶ ವಿಸ್ತರಣೆ ಮಾಡಿದರೆ ಚೆನ್ನಾಗಿರುತ್ತದೆ. ಈ ವಸ್ತು ಪ್ರದರ್ಶನ ನಮಗೆ ಬಹಳ ಉಪಯುಕ್ತವಾಗಿದೆ ಎಂದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

Key words: Open Day – CFTRI- Mysore-Exhibition- School –children