2000 ರೂ.ಮುಖಬೆಲೆಯ ನೋಟುಗಳನ್ನು ಬ್ಯಾಂಕ್’ಗಳಿಗೆ ಹಿಂದಿರುಗಿಸಲು ಇನ್ನು ಮೂರೇ ದಿನ ಬಾಕಿ!

ಬೆಂಗಳೂರು, ಸೆಪ್ಟೆಂಬರ್ 27, 2023 (www.justkannada.in): 2000 ರೂ.ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗಳಿಗೆ ಹಿಂದಿರುಗಿಸಿ ಬೇರೆ ನೋಟು ಪಡೆಯಲು ಇನ್ನು ಮೂರು ದಿನ ಬಾಕಿ ಉಳಿದಿವೆ.

ಮೇನಲ್ಲಿ 2000 ರೂ.ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಆರ್ ಬಿಐ ಹಿಂಪಡೆದುಕೊಂಡಿತ್ತು. ಆ ನೋಟುಗಳನ್ನು ಬ್ಯಾಂಕ್ ಗಳಿಗೆ ಹಿಂದಿರುಗಿಸಿ ಬೇರೆ ನೋಟು ಪಡೆಯುವಂತೆ ಸೆ.30ರವರೆಗೆ ಗಡುವು ನೀಡಿತ್ತು.

ಹೀಗಾಗಿ ಸೆ.30ರೊಳಗೆ 2000 ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ಗಡುವು ಮುಗಿದ ನಂತ್ರವೂ ಬದಲಾವಣೆ ಸಾಧ್ಯವಿದೆಯೇ ಎಂಬ ಬಗ್ಗೆ ಆರ್ ಬಿಐ ಇನ್ನು ಸ್ಪಷ್ಟ ಮಾಹಿತಿ ನೀಡಿಲ್ಲ.

ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳ ಪೈಕಿ, ಶೇ.93ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ಮರಳಿವೆ. ಹೀಗಾಗಿ ಕೂಡಲೇ ಬಳಿ 2000 ಮುಖ ಬೆಲೆಯ ನೋಟು ಇದ್ದರೇ ಬ್ಯಾಂಕಿಗೆ ತೆರಳಿ ಕೊಟ್ಟು, ಬೇರೆ ನೋಟು ಪಡೆಯಿರಿ.