Thursday, August 27, 2026

BDA Apartments

Home Front Page ಶಿವಮೊಗ್ಗ ದಸರಾಗೆ ಕೇವಲ 20 ಲಕ್ಷ ರೂ.: ಸರ್ಕಾರಕ್ಕೆ ಬಡತನ ಇದ್ಯಾ ಇಲ್ಲ ಆರ್ಥಿಕ ದಿವಾಳಿಯಾಗಿದ್ಯಾ-...

ಶಿವಮೊಗ್ಗ ದಸರಾಗೆ ಕೇವಲ 20 ಲಕ್ಷ ರೂ.: ಸರ್ಕಾರಕ್ಕೆ ಬಡತನ ಇದ್ಯಾ ಇಲ್ಲ ಆರ್ಥಿಕ ದಿವಾಳಿಯಾಗಿದ್ಯಾ- ಕೆ.ಎಸ್ ಈಶ್ವರಪ್ಪ ಕಿಡಿ.

ಶಿವಮೊಗ್ಗ,ಅಕ್ಟೋಬರ್,21,2023(www.justkannada.in): ಶಿವಮೊಗ್ಗ ದಸರಾ ಆಚರಣೆಗೆ ಕೇವಲ 20 ಲಕ್ಷ ರೂ. ಕೊಟ್ಟಿದೆ.  ಸರ್ಕಾರಕ್ಕೆ ಬಡತನ ಇದ್ಯಾ  ಅಥವಾ ಆರ್ಥಿಕವಾಗಿ ದಿವಾಳಿಯಾಗಿದ್ಯಾ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ ಕಾರಿದರು.

ಈ ಕುರಿತು ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಮೈಸೂರು ಬಿಟ್ಟರೇ ಶಿವಮೊಗ್ಗ ದಸರಾ ವೈಭವದಿಂದ ನಡೆಯುತ್ತದೆ. ಶಿವಮೊಗ್ಗ ದಸರಾ ಆಚರಣೆಗೆ ಸರ್ಕಾರ ಕೇವಲ 20 ಲಕ್ಷ ರೂ. ಕೊಟ್ಟಿದೆ. ನೀವು ಹಣ ಕೊಡದಿದ್ದರೆ ಹೇಳಿ ನಾವು ಸಾರ್ವಜನಿಕರ ಬಳಿ ಚಂದಾ ಎತ್ತಿ ಆಚರಣೆ ಮಾಡುತ್ತೇವೆ ಎಂದು ಹರಿಹಾಯ್ದರು.

ಕ್ಯಾಬಿನೆಟ್ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಎರಡೂವರೆ ವರ್ಷದ ನಂತರ ಹಳಬರು ತೆಗೆದು ಹೊಸಬರು ಹಾಕುತ್ತೇವೆ ಅಂತಾರೆ. ಅಶೋಕ್ ಪಟ್ಟಣ್ ಕ್ಯಾಬಿನೆಟ್ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಎಂ.ಬಿ.ಪಾಟೀಲ್, ಅಶೋಕ್ ಪಟ್ಟಣ್ ಹೇಳಲು ಯಾರು? ಒಬ್ಬೊಬ್ಬ ಮಂತ್ರಿ ಒಂದೊಂದು ಹೇಳಿಕೆ ಕೊಡೋದು ಒಳ್ಳೆಯದಲ್ಲ. ಮುಖ್ಯಮಂತ್ರಿಗಳು ಗಮನ ಹರಿಸಲಿ ಈ ರೀತಿ ಸಚಿವರು ಹೇಳಿಕೆ ಕೊಡುವುದು ನಿಲ್ಲಿಸಲಿ ಎಂದು ಟಾಂಗ್ ನೀಡಿದರು.

Key words: Only -Rs 20 lakh – Shimoga Dussehra-government -poor -KS Eshwarappa