ಮಾಧ್ಯಮದ ಮುಂದೆ ಪಕ್ಷದ ವಿಚಾರವನ್ನ ಮಾತನಾಡಬಾರದು- ಸ್ವಪಕ್ಷ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಂದೇಶ.

ಬೆಂಗಳೂರು, ಅಕ್ಟೋಬರ್,21,2023(www.justkannada.in): ಪಕ್ಷದ ವಿಚಾರವನ್ನು ಮಾಧ್ಯಮದ ಮುಂದೆ ಮಾತಾಡಬಾರದು ಎಂದು ಸ್ವಪಕ್ಷ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವಿಚಾರ ಕುರಿತು  ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, “ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರಗಳು ಏನೇ ಇದ್ದರೂ ಶಾಸಕರು ಮುಖ್ಯಮಂತ್ರಿಗಳು ಹಾಗೂ ನನ್ನ ಬಳಿ ಚರ್ಚೆ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಮಾತನಾಡಬಾರದು” ಎಂದರು.

2.5 ವರ್ಷದಲ್ಲಿ ಕ್ಯಾಬಿನೆಟ್ ಪುನರ್ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ನಾನು ಒಂದು ದೊಡ್ಡ ಸಂಕಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಪಕ್ಷದ ವಿಚಾರವಾಗಿ ಏನ್ ಬೇಕು ಅದು ಚರ್ಚೆಯಾಗಿದೆ. ಕೆಲವೊಂದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ. ಸದ್ಯಕ್ಕೆ ಆ ರೀತಿಯ ಮಾಹಿತಿ ನನ್ನ ಬಳಿ ಇಲ್ಲ ಎಂದರು.

ದುಡ್ಡು ಮಾಡುವುದು, ಕೃತಕ ವಿದ್ಯುತ್ ಅಭಾವ ಸೃಷ್ಟಿ  ಆರೋಪ ಕುರಿತು ಪ್ರತಿಕ್ರಿಯಿಸಿದ  ಡಿಕೆ ಶಿವಕುಮಾರ್, ಬಿಜೆಪಿ ಸರ್ಕಾರ ಹೆಚ್ಚಿನ ವಿದ್ಯುತ್​ ಉತ್ಪಾದನೆ ಮಾಡಿಲ್ಲ. ಪ್ರತೀ ವರ್ಷ ಶೇ 10 ರಿಂದ 15 ಹೆಚ್ಚಿಗೆ ಉತ್ಪಾದನೆ ಮಾಡಬೇಕು. ಅವರಿಗೇನಾದರು ರೈತರ ಬಗ್ಗೆ ಕಾಳಜಿ ಇದ್ದಿದ್ದರೇ ಅವರಿಗೆ ಗೊತ್ತಾಗುತ್ತಿತ್ತು. 192 ತಾಲೂಕುಗಳನ್ನು ಸುಮ್ಮನೇ ಘೋಷಣೆ ಮಾಡುತ್ತಿದ್ವಾ?  ಎಂದು ಟಾಂಗ್ ನೀಡಿದರು.

Key words: Don’t -talk about- party -issues – media – DCM -DK Shivakumar’s- MLAs