ಆನ್ ಲೈನ್, ಆಫ್ ಲೈನ್ ತರಗತಿ  ಸ್ಥಗಿತಗೊಳಿಸಿ ಇಂದಿನಿಂದಲೇ ಹೋರಾಟ : ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ 

ಬೆಂಗಳೂರು,ಡಿಸೆಂಬರ್,20,2020(www.justkannada.in) : ಶಿಕ್ಷಣ ಇಲಾಖೆ ಹೀನಾಯ ಸ್ಥಿತಿ ತಲುಪಿದೆ. ನಮ್ಮ ಮೇಲೆ ಚಪ್ಪಡಿ ಕಲ್ಲು ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆನ್ ಲೈನ್, ಆಫ್ ಲೈನ್ ತರಗತಿ  ಸ್ಥಗಿತಗೊಳಿಸಿ ಇಂದಿನಿಂದಲೇ ಹೋರಾಟ ನಡೆಸುತ್ತೇವೆ ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಆಕ್ರೋಶವ್ಯಕ್ತಪಡಿಸಿದ್ದಾರೆ.

Teachers,solve,problems,Government,bound,Minister,R.Ashokಶಿಕ್ಷಣ ಸಚಿವರ ಹೇಳಿಕೆಯಿಂದ ಸಂಘರ್ಷ ಸೃಷ್ಟಿಯಾಗಿದೆ. ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವೆ ಸಂಘರ್ಷ ಹುಟ್ಟುಹಾಕಿದ್ದಾರೆ. ಸರ್ಕಾರ ಪದೇ, ಪದೇ ಸುತ್ತೋಲೆ ನೀಡುತ್ತಿದೆ ಎಂದು ದೂರಿದರು.

ಶಿಕ್ಷಣ ಇಲಾಖೆಯ ಸ್ಥಿತಿ ಹೀನಾಯವಾಗಿದ್ದು, ಬೇರೆ ಯಾರಾದರೂ ಶಿಕ್ಷಣ ಇಲಾಕೆ ನಿರ್ವಹಿಸಲಿ.  ಶಿಕ್ಷಣ ಸಚಿವರು ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಒಂದೇ ದಿನಕ್ಕೆ ಅದನ್ನು ಹುಸಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರಕ್ಕೆ 15 ಬೇಡಿಕೆಗಳನ್ನು ಇಟ್ಟಿದ್ದು, ಬೇಡಿಗಳ ಈಡೇರಿಕೆಗೆ ಸ್ಪಂದಿಸಬದ್ದರೆ ಸತ್ಯಗಾಹ್ರ ನಡೆಸುತ್ತೇವೆ. ಎಲ್ಲ ಶೈಕ್ಷಣಿಕ ಚಟವುಟಿಕೆ ನಿಲ್ಲಿಸಲು ನಿರ್ಧರಿಸಲಾಗಿದೆ. ನಾಳೆಯಿಂದ ಎರಡು ಹಂತದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಂತರ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.

key words : Online-offline-classroom-Stop-fighting-today-President-Rupsah-Lokesh Talikote