ಅಧಿಕಾರಿಗಳ ಯಡವಟ್ಟು: ಸಚಿವ ಸೋಮಣ್ಣರಿಂದ ಧ್ವಜಾರೋಹಣ ವೇಳೆ ಕಟ್ ಆಗಿ ಬಿದ್ದ ಹಗ್ಗ….

ಮೈಸೂರು,ಸೆ,19,2019(www.justkannada.in): ಧ್ವಜಾರೋಹಣ ನೆರವೇರಿಸಲು ಮುಂದಾದ ವೇಳೆ ಹಗ್ಗವೇ ಕಟ್ ಆಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೇಲೆ ಬಿದ್ದಿರುವ ಘಟನೆ ನಡೆದಿದೆ.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದಾಗಿ ಈ ಘಟನೆ ನಡೆದಿದೆ. ಜಿಲ್ಲಾಮಟ್ಟದ ಒಂದು ದಿನದ ದಸರಾ ಕ್ರೀಡಾಕೂಟವನ್ನ ನಗರದ ಚಾಮುಂಡಿ  ವಿಹಾರ ಸ್ಟೇಡಿಯಂನಲ್ಲಿ ಆಯೋಜನೆ ಮಾಡಲಾಗಿತ್ತು. ಈ ನಡುವೆ ಸಚಿವ ವಿ.ಸೋಮಣ್ಣ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ನೀಡಲು ಧ್ವಜಾರೋಹಣ ನೆರವೇರಿಸಲು ಮುಂದಾದಾಗ ಧ್ವಜಾರೋಹಣ ಹಗ್ಗವೇ ಕಟ್ ಆಗಿ ಬಿದ್ದಿದೆ. ಸತ್ವ ಇಲ್ಲದ ಹಗ್ಗ ಬಳಸಿದ ಪರಿಣಾಮ ಹಗ್ಗವೇ ಕಿತ್ತು ಬಂದಿದೆ.

ಈ ವೇಳೆ ಘಟನೆಯಿಂದ ಬೇಸರಗೊಂಡ ಸಚಿವ ಸೋಮಣ್ಣ, ಏನ್ ಹಗ್ಗ ಕಟ್ಟಿದ್ದಿರಾರಿ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಹಾಗೆಯೇ ಸಚಿವ ವಿ.ಸೋಮಣ್ಣ ಕ್ರೀಡಾ ಕೂಟ ಆಯೋಜಕರಿಗೆ ಸೈಲೆಂಟ್ ಪಾಠ ಹೇಳಿಕೊಟ್ಟರು. ಈ ಮೂಲಕ ಸಚಿವ ಸೋಮಣ್ಣಗೆ ಕಹಿ ಅನುಭವವಾಗಿದ್ದು ನಂತರ ಸೋಮಣ್ಣ ಧ್ವಜ ಹಾರಿಸಲು ಸಾಧ್ಯವಾಗದೇ ಕ್ರೀಡಾಪಟುಗಳ ಪರಿಚಯಕ್ಕೆ ತೆರಳಿದರು.

Key word: Officers –mysore-Minister- V. Somanna-flag- Rope- cut