ಏರ್ ಶೋಗೆ ಡೇಟ್ ಫಿಕ್ಸ್: ಈ ಬಾರಿ ಸ್ಟ್ರೀಟ್ ಫೆಸ್ಟಿವಲ್ ಬದಲು ಚಿತ್ರಸಂತೆ, ಹಸಿರು ಸಂತೆ- ಮೈಸೂರು ಡಿಸಿ ಅಭಿರಾಮ್ ಜೀ ಶಂಕರ್ ಮಾಹಿತಿ…

ಮೈಸೂರು,ಸೆ,19,2019(www.justkannada.in): ಅಕ್ಟೋಬರ್ 2ಕ್ಕೆ ಏರ್ ಶೋ ಫಿಕ್ಸ್ ಆಗಿದೆ. ಈ ಬಗ್ಗೆ ಈಗಾಗಲೇ ರಕ್ಷಣಾ ಇಲಾಖೆಯೊಂದಿಗೆ ಮಾತುಕತೆ ಹಾಗೂ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಮಾಹಿತಿ ನೀಡಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಅಕ್ಟೋಬರ್ 2ಕ್ಕೆ ಏರ್ ಶೋ ನಡೆಯಲಿದ್ದು, ಈ  ಬಾರಿಯ ಏರ್ ಶೋ ನಲ್ಲಿ ನಡೆಯಲಿರುವ ಕಾರ್ಯಕ್ರಮಗಳನ್ನ ರಕ್ಷಣಾ ಇಲಾಖೆ ನಿಗದಿಪಡಿಸಲಿದೆ. ಇನ್ನು ವೈವಿಧ್ಯಮಯ ಪ್ರದರ್ಶನಗಳಿಗೆ ಒತ್ತು ಕೊಡಲಾಗಿದೆ.  ಈಗಾಗಲೇ  ಮುಖ್ಯಮಂತ್ರಿಗಳ ಕಾರ್ಯದರ್ಶಿಯಿಂದ ರಕ್ಷಣಾ ಇಲಾಖೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

ಹಾಗೆಯೇ ಈ ಬಾರಿ ಸ್ಟ್ರೀಟ್ ಫೆಸ್ಟಿವಲ್ ಬದಲು ಚಿತ್ರಸಂತೆ ಹಾಗೂ ಹಸಿರು ಸಂತೆ ಆಯೋಜನೆ ಮಾಡಲಾಗಿದೆ. ಕಳೆದ ವರ್ಷ ಉಂಟಾದ ಗೊಂದಲದಿಂದ ಸ್ಟ್ರೀಟ್ ಫೆಸ್ಟಿವಲ್ ಮಾದರಿ ಬದಲು ಮಾಡಲಾಗಿದೆ  ಸ್ಟ್ರೀಟ್ ಫೆಸ್ಟಿವಲ್ ಬದಲಾಗಿ ಚಿತ್ರಸಂತೆ ಹಾಗೂ ಹಸಿರು ಸಂತೆ  ನಡೆಸಲಾಗುತ್ತದೆ. ಕಳೆದ ವರ್ಷದಂತೆ ಈ ಬಾರಿಯೂ ನಗರದ ನ್ಯಾಯಾಲಯದ ಮುಂಭಾಗದ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಂಜೆ 5ಗಂಟೆಯೊಳಗೆ ಚಿತ್ರಸಂತೆ ಹಾಗೂ ಹಸಿರು ಸಂತೆ ಮುಕ್ತಾಯವಾಗಲಿದ್ದು, ಕುಶಲಕರ್ಮಿಗಳು,  ಕಲಾವಿದರು ಹಾಗೂ  ರೈತರನ್ನ ಪ್ರೋತ್ಸಾಹಿಸುವ ಸಲುವಾಗಿ ಒಂದುದಿನದ  ಚಿತ್ರಸಂತೆ ಹಾಗೂ ಹಸಿರು ಸಂತೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಕೂಡಲೇ ಕಾರ್ಯಕ್ರಮದ ದಿನಾಂಕವನ್ನು  ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.

Key words: Date fix – air show-street festival –hasiru santhe– Mysore DC -Abhiram Ji Shankar