Saturday, August 8, 2026

BDA Apartments

Home Front Page ಅಕ್ರಮ ಗಣಿಗಾರಿಕೆ  ಮಾಹಿತಿ ನೀಡದ ಅಧಿಕಾರಿಗಳಿಗೆ ಇಂದೇ ನೋಟಿಸ್- ಸಚಿವ ನಾರಾಯಣಗೌಡ.

ಅಕ್ರಮ ಗಣಿಗಾರಿಕೆ  ಮಾಹಿತಿ ನೀಡದ ಅಧಿಕಾರಿಗಳಿಗೆ ಇಂದೇ ನೋಟಿಸ್- ಸಚಿವ ನಾರಾಯಣಗೌಡ.

ಮಂಡ್ಯ,ಜುಲೈ,9,2021(www.justkannada.in):  ಕೆಆರ್.ಎಸ್ ಡ್ಯಾಂ ಬಿರುಕು ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಸಾಕಷ್ಟು ಚರ್ಚೆ ರಾಜಕೀಯ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿರುವ ಬೆನ್ನಲ್ಲೆ ಇದೀಗ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಅಕ್ರಮ ಗಣಿಗಾರಿಕೆ  ಮಾಹಿತಿ ನೀಡದ ಅಧಿಕಾರಿಗಳಿಗೆ ನೋಟೀಸ್ ನೀಡುವುದಾಗಿ ತಿಳಿಸಿದ್ದಾರೆ.jk

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ನಾರಾಯಣಗೌಡ, , ಅಕ್ರಮ ಗಣಿಗಾರಿಕೆ  ಮಾಹಿತಿ ನೀಡದ ಅಧಿಕಾರಿಗಳಿಗೆ ಇಂದೇ ನೋಟೀಸ್ ನೀಡುತ್ತೇವೆ. ಅಕ್ರಮ ಗಣಿಗಾರಿಕೆಗೆ ಹಿಂದಿನ ಅಧಿಕಾರಿ ಸಾಥ್ ನೀಡಿ ಹೋದ್ರು. ಈಗಿನ ಅಧಿಕಾರಿಗಳು ಅದೇ ಹಾದಿ ಹಿಡಿದರೇ ನೊಟೀಸ್ ನೀಡುತ್ತೇವೆ ಎಂದು ತಿಳಿಸಿದರು.

ಅಕ್ರಮ ಗಣಿಗಾರಿಕೆ  ತನಿಖೆ ಬಗ್ಗೆ ಸಚಿವರ ಜತೆ  ಚರ್ಚಿಸಲಾಗುತ್ತದೆ. ಈ ಅಕ್ರಮ ಗಣಿಗಾರಿಕೆ ನಿಲ್ಲದಿದ್ರೆ ಸಂಸದೆ ಸುಮಲತಾ ಅಂಬರೀಶ್  ಹಾದಿಯಲ್ಲಿ ಹೋರಾಟ ಮಾಡುತ್ತೇವೆ. ಅಗತ್ಯವಿದ್ದರೇ ಸಿಬಿಐ ತನಿಖೆಯೂ ನಡೆಯಬೇಕು ಎಂದು ಸಚಿವ ನಾರಾಯಣಗೌಡ ತಿಳಿಸಿದರು.

Key words: Notice – Officers -Not Providing- Illegal Mining- Information-Minister- Narayana Gowda.