ಸೇಡಿನ ರಾಜಕಾರಣ ಮಾಡ್ತಿಲ್ಲ: ಡಿಕೆಶಿ ಅವರ ವಿಚಾರದಲ್ಲಿ ಬಿಜೆಪಿ ಮೈಲೇಜ್ ತಗೊಬೇಕಿಲ್ಲ- ಕಾಂಗ್ರೆಸ್ ಆರೋಪಕ್ಕೆ ಸಚಿವ ಮಾಧುಸ್ವಾಮಿ ಟಾಂಗ್..

ಬೆಳಗಾವಿ,ಸೆ,4,2019(www.justkannada.in): ಡಿ.ಕೆ ಶಿವಕುಮಾರ್ ವಿರುದ್ದ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಅವರ ವಿಚಾರದಲ್ಲಿ ಬಿಜೆಪಿ ಮೈಲೇಜ್ ತಗೊಬೇಕಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ಇಡಿಯಿಂದ ಡಿ.ಕೆ.ಶಿವಕುಮಾರ್ ಬಂಧನವಾಗಿರುವುದು ಬಿಜೆಪಿಯ ಸೇಡು ಮತ್ತು ದ್ವೇಷದ ರಾಜಕಾರಣದಿಂದ ಎಂಬ ಕಾಂಗ್ರೆಸ್ ಆರೋಪ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ  ಸಚಿವ ಮಾಧುಸ್ವಾಮಿ, ಬಿಜೆಪಿ ಡಿಕೆಶಿ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಸೇಡಿನ ರಾಜಕಾರಣ ಮಾಡುವ ಕಾರಣ ಯಾವುದು ಬಿಜೆಪಿಗೆ ಇಲ್ಲ. ಕಾನೂನಿನ ಕ್ರಮ ಜರುಗಿಸಿದಾಗ ಎಲ್ಲಾ ಅಧಿಕಾರದಲ್ಲಿ ಇದ್ದ ಸರ್ಕಾರದ ವಿರುದ್ಧ ಆರೋಪ ಮಾಡ್ತಾರೆ ಎಂದು ಟೀಕಿಸಿದರು.

ಶಿವಕುಮಾರ್ ನಾನು ಇಬ್ಬರು ಒಳ್ಳೆಯ ಸ್ನೇಹಿತರು.ಡಿಕೆ ಶಿವಕುಮಾರ್ ತಪ್ಪು ಮಾಡಿದ್ದಾರಾ ಇಲ್ಲವೋ ನನಗೆ ಗೊತ್ತಿಲ್ಲ. ಇಡಿ ಅಧಿಕಾರಿಗಳು ಹೇಳಿದ್ದು ತನಿಖೆಗೆ ಸಹಕರಿಸುತ್ತಿಲ್ಲಾ ಅಂತಾ. ಡಿ.ಕೆ. ಶಿವಕುಮಾರ್ ತನಿಖೆ ಗೆ ಸಹಕರಿಸಬೇಕಿತ್ತು. ಸಹಕರಿಸಿಲ್ಲಾ ಅಂದರೆ ಸೇಡು ಅಂದ್ರೆ ಹೇಂಗೆ. ಇಡಿ ಅಧಿಕಾರಿಗಳು ಡಿಕೆಶಿ ತಪ್ಪಿತಸ್ಥರು ಅಂತಾ ಅರೇಸ್ಟ್ ಮಾಡಿಲ್ಲ ಎಂದರು.

ಡಿಕೆಶಿ ಪರ ಪ್ರತಿಭಟನೆ ಮಾಡುವಾಗ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡ್ತಿವಿ. ಯಾರೋ ಕಲ್ಲಲ್ಲಿ ಹೊಡಿತಾರೆ ಅಂದ್ರೆ ಅಳುತಾ ಕುಳಿತುಕೊಳ್ಳಲು ಆಗುತ್ತಾ ಕ್ರಮ ಜರುಗಿಸುತ್ತೇವೆ ಎಂದು ಮಾಧುಸ್ವಾಮಿ ತಿಳಿಸಿದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು ಡಿಸಿಎಂ ಕಾರಜೋಳ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಆಕಸ್ಮಿಕವಾಗಿ ಕಾರಜೋಳ ಸಾಹೇಬ್ರು ಆ ಮಾತು ಹೇಳಿದ್ರು.ಕಾನೂನಿನ ಕ್ರಮ ಜರುಗಿಸುತ್ತಾರೆ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ.  ಆದ್ರೆ ಅದನ್ನ ಇಷ್ಟೊಂದು ದೊಡ್ಡ ವಿಚಾರ ಆಗುತ್ತೆ ಅಂತೆ ಗೊತ್ತಿರಲಿಲ್ಲ. ನಮಗೆ ಶಿವಕುಮಾರ್ ತಪ್ಪಿತಸ್ಥರು ಅಂತಾ ಹೇಳಿಲ್ಲ ಅವರು ಗಿಲ್ಟ್ ಪಡಬೇಕಿಲ್ಲ. ನಿನ್ನೆ ಇಡಿ ಕಚೇರಿ ಮುಂದೆ ಡಿಕೆಶಿ ಇಷ್ಟೊಂದು ಜನರನ್ನು ಸೇರಿಸಬಾರದಿತ್ತು. ನಾಲ್ಕು ದಿನ ತನಿಖೆ ಗೆ ಸಹಕಾರ ನೀಡಿದಂತೆ ಇನ್ನು ಎರಡದಿನ ಮಾಡಬೇಕಿತ್ತು. ಡಿಕೆಶಿ ಅವರ ವಿಚಾರದಲ್ಲಿ ಬಿಜೆಪಿ ಮೈಲೇಜ್ ತಗೊಬೇಕಿಲ್ಲ ಎಂದು ಟಾಂಗ್ ಕೊಟ್ಟರು.

ಅನರ್ಹನ ಶಾಸಕರು ಮಿನಿಸ್ಟರ್ ಆಗ್ತಾರೆ. ನಾನು ನೇರವಾಗಿ ಹೇಳ್ತಿನಿ ಅನರ್ಹ ಶಾಸಕರಿಗೆ ಯಾವ ರೀತಿಯು ಅನ್ಯಾಯ ಆಗಲ್ಲ. ಸುಪ್ರೀಂ ಕೋರ್ಟ್ ರಾಮಮಂದಿರ ವಿಚಾರಣೆ ನಡುತ್ತಿದೆ.  ಹೀಗಾಗಿ ಯಾರು ಕೂಡಾ ಕೋರ್ಟ್ ಮೇಲೆ ಒತ್ತಡ ಹಾಕಲು ಆಗಲ್ಲ. ಸುಪ್ರೀಂ ಕೋರ್ಟಿನಲ್ಲಿ ಅವರಿಗೆಲ್ಲ ಅನರ್ಹತೆ ಆಗುವುದಿಲ್ಲ. ಅನರ್ಹತೆ ಆದ್ರು ಚುನಾವಣೆ ನಿಲ್ಲಬಾರದು ಅಂತಾ ಏನು ಇಲ್ಲ. ರಾಜೀನಾಮೆ ಕೊಟ್ಟವರನ್ನ ಡಿಪೆಕ್ಟರ್ಸ್ ಅಂತಾ ಹೇಳಲು ಆಗುವುದಿಲ್ಲ. ಒಂದ ವೇಳೆ ಅನರ್ಹತೆ ಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದರು. ಮತ್ತೆ ಅವರು ಚುನಾವಣೆಗೆ ನಿಲ್ಲಬಹುದು. ನನ್ನ ಅಂದಾಜಿನಲ್ಲಿ ಅನರ್ಹ ಶಾಸಕರು ಮಿನಿಸ್ಟರ್ ಆಗಬಹುದು ಎಂದರು.

Key words: not Revenge -Politics -BJP – belagavi-minister- maduswamy