ಹಿಂದೂ ಹಿಂದೂ ಎಂದುಕೊಂಡೇ ಗಣೇಶ ಹಬ್ಬದಂದು ಎಡೆ ಇಡಲು ಬಿಡಲಿಲ್ಲ-ಡಿ.ಕೆ ಶಿವಕುಮಾರ್ ಬಂಧನ ಕುರಿತು ಬಿಜೆಪಿ ವಿರುದ್ದ ಸಿಎಂ ಇಬ್ರಾಹಿಂ ವಾಗ್ದಾಳಿ…

ಮೈಸೂರು,ಸೆ,4,2019(www.justkannada.in): ಹಿಂದೂ ಹಿಂದೂ  ಎಂದುಕೊಂಡೇ ಗಣೇಶ ಹಬ್ಬದ ದಿನದಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಂದೆಗೆ ಎಡೆ ಇಡಲು ಬಿಡಲಿಲ್ಲ. ವಿನಾಶೆ ಕಾಲೆ ಬಿಜೆಪಿಗೆ ವಿಪರೀತ ಬುದ್ದಿ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.

ಇಡಿಯಿಂದ ಡಿಕೆಶಿ ಬಂಧನ ಕುರಿತು ಮೈಸೂರಿನಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ, ಹಿಂದೂ ಹಿಂದೂ ಎಂದು ಕೊಂಡೆ ಗಣೇಶ ಹಬ್ಬದಂದು ಎಡೆ ಇಡಲು ಬಿಡಲಿಲ್ಲ. ಗಣೇಶ ಹಬ್ಬದಂದು ಒಂದು ದಿನವಾದರೂ ಅವರ ತಂದೆಗೆ ಎಡೆ ಇಡುವುದಕ್ಕೆ ಬಿಡುತ್ತಿದ್ದರೆ ಏನಾಗುತ್ತಿತ್ತು. ಎರಡು ವರ್ಷ ಸುಮ್ಮನಿದ್ರಲ್ವಾ. ಇದೊಂದು ಅಮಾನ್ಯವಾದಂತಹ ಕ್ರಮವಾಗಿದೆ ಎಂದು ಕಿಡಿಕಾರಿದರು.

ಕುಗ್ಗಿಸಿದಷ್ಟು ನಾವು ಪುಟಿದೇಳುತ್ತೇವೆ. ರಾಜಕೀಯವಾಗಿ ನಾವು ಇನ್ನು ಶಕ್ತಿವಂತರಾಗುತ್ತೇವೆ. ಡಿಕೆಶಿ ಬಂಧನ ರಾಜಕೀಯ ಪ್ರೇರಿತವಾದದ್ದು ಎಂದು ಸಿಎಂ ಇಬ್ರಾಹಿಂ ಹರಿಹಾಯ್ದರು.

Key words: Hindu-CM Ibrahim –against- BJP – DK Shivakumar’s- arrest