Saturday, September 12, 2026

BDA Apartments

Home Front Page ರಾವಣ ಮಾತ್ರ ಅಲ್ಲ, ಸಿದ್ದರಾಮಯ್ಯ ಕೂಡ ರಾಮ ವಿರೋಧಿ –ಮಾಜಿ ಸಚಿವ ಸುನೀಲ್​ ಕುಮಾರ್​ ವಾಗ್ದಾಳಿ.

ರಾವಣ ಮಾತ್ರ ಅಲ್ಲ, ಸಿದ್ದರಾಮಯ್ಯ ಕೂಡ ರಾಮ ವಿರೋಧಿ –ಮಾಜಿ ಸಚಿವ ಸುನೀಲ್​ ಕುಮಾರ್​ ವಾಗ್ದಾಳಿ.

ಬೆಂಗಳೂರು, ಜನವರಿ,2,2024(www.justkannada.in):  ರಾವಣ ಮಾತ್ರ ಅಲ್ಲ, ಸಿದ್ದರಾಮಯ್ಯ ಕೂಡ ರಾಮನ ವಿರೋಧಿ ಎನ್ನುವುದನ್ನು ತೋರಿಸಿದ್ದಾರೆ ಎಂದು  ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.

ಕರಸೇವಕರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳ ಜೊತೆ  ಮಾತನಾಡಿದ ಸುನೀಲ್ ಕುಮಾರ್, ರಾಮ ಮಂದಿರ ಉದ್ಘಾಟನೆಯಿಂದ ಇಡೀ ದೇಶವೇ ಖುಷಿ ಪಡುತ್ತಿದೆ. ಆದರೆ, ಸಿದ್ದರಾಮಯ್ಯ ಅವರು ಶ್ರೀಕಾಂತ ಪೂಜಾರಿ ಎಂಬುವವರನ್ನು ಬಂಧಿಸುವ ಮೂಲಕ ಅಪಶಕುನ ಮಾಡುತ್ತಿದ್ದಾರೆ.  ನಾನು ಪಟ್ಟಿ ಕೊಡುತ್ತೇನೆ, ನಿಮಗೆ ತಾಕತ್ ಇದ್ದರೆ ಕರಸೇವಕರನ್ನ ಬಂಧಿಸಿ. ನಾನೂ ಕರ ಸೇವೆಯಲ್ಲಿ ಭಾಗಿಯಾಗಿದ್ದೆ, ಬಂಧನ ಮಾಡಿದಾಕ್ಷಣ ಹಿಂದುತ್ವಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.ರಾವಣ ಮಾತ್ರ ಅಲ್ಲ sunil kumar

ಸರ್ಕಾರ ಹಿಂದುತ್ವದ ಪರ, ಹಿಂದೂಗಳ ಭಾವನೆ ಇದ್ದರೆ ನೂರು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಿ. ಇನ್ನು ಮನೆ ಮನೆಗಳಲ್ಲಿ ದೀಪ ಬೆಳಗಿಸಿ ಎಂದು ಪ್ರಧಾನಿ ಕರೆ ಕೊಟ್ಟಿದ್ದಾರೆ. ಅದರಂತೆ ಸಿಎಂ ಹಾಗೂ ಸಚಿವರು ಕೂಡ ತಮ್ಮ ಮನೆಯಲ್ಲಿ ನಂದಾ ದೀಪ ಬೆಳಗಿಸಲಿ, ಸಿಎಂ ಕೂಡ ತಮ್ಮ ಕುಟುಂಬ ಸದಸ್ಯರ ಜೊತೆ ಸೇರಿ ದೀಪ ಹಚ್ಚಲಿ ಎಂದು  ಸುನೀಲ್ ಕುಮಾರ್ ಸಲಹೆ ನೀಡಿದರು.

Key words: Not only –Ravana- Siddaramaiah –also- anti-Rama – MLA-Sunil Kumar