Tuesday, September 1, 2026

BDA Apartments

Home Front Page ಸಿಎಂ ಬಿಎಸ್ ವೈ ಬದದಲಾವಣೆ ಪ್ರಶ್ನೆಯೇ ಇಲ್ಲ-ಸಚಿವ ಗೋಪಾಲಯ್ಯ ಸ್ಪಷ್ಟನೆ….

ಸಿಎಂ ಬಿಎಸ್ ವೈ ಬದದಲಾವಣೆ ಪ್ರಶ್ನೆಯೇ ಇಲ್ಲ-ಸಚಿವ ಗೋಪಾಲಯ್ಯ ಸ್ಪಷ್ಟನೆ….

ಬೆಂಗಳೂರು, ಅಕ್ಟೋಬರ್,20,2020(www.justkannada.in): ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಉಳಿಯಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆಹಾರ ಸಚಿವ ಕೆ.ಗೋಪಾಲಯ್ಯ,   ಸಿಎಂ ಯಡಿಯೂರಪ್ಪ ಅವರ ಬದಲಾವಣೆಯ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಆಹಾರ ಸಚಿವ ಗೋಪಾಲಯ್ಯ, ಯಡಿಯೂರಪ್ಪ ಸಮರ್ಥವಾಗಿದ್ದಾರೆ. ಕಷ್ಟದ ಕಾಲದಲ್ಲಿ ಸರ್ಕಾರ ನಡೆಸಿಕೊಂಡು ಹೋಗ್ತಿದ್ದಾರೆ. ಸಿಎಂ ಆಗಿ ಅವರೇ ಮುಂದುವರೆಯುತ್ತಾರೆ. ಅವರ ಬದಲಾವಣೆಯ ಪ್ರಶ್ನೆಯೇ ಇಲ್ಲ. ನಾವು ಅವರ ನಾಯಕತ್ವದಲ್ಲಿ ಮುನ್ನಡೆಯುತ್ತೇವೆ ಎಂದು ತಿಳಿಸಿದ್ದಾರೆ. no question - replacing - CM BS yeddyurappa- Minister -Gopalaiah

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ​ಗೆ ಅಸಮಾಧಾನ ಇದ್ದರೆ‌ ಪಕ್ಷದ ನಾಲ್ಕು ಗೋಡೆ ಮಧ್ಯೆ ಇದ್ದು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದು ಯಡಿಯೂರಪ್ಪರಿಂದಲೇ. ಈಗ ಉಪಚುನಾವಣೆಗಳನ್ನು ಅವರ ನಾಯಕತ್ವದಲ್ಲೇ ಗೆಲ್ಲುತ್ತೇವೆ  ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

Key words: no question – replacing – CM BS yeddyurappa- Minister -Gopalaiah