ಸಿಎಂ ಸ್ಥಾನದಿಂದ ಬಿಎಸ್ ವೈ ಕೆಳಗಿಳಿದ್ರೆ ‘ಕೈ’ ಗೆ ಲಾಭ- ಮಾಜಿ ಸಚಿವ ರಾಮಲಿಂಗರೆಡ್ಡಿ….

ಬೆಂಗಳೂರು,ಅಕ್ಟೋಬರ್,20,2020(www.justkannada.in):  ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ. ಒಂದು ವೇಳೆ ಸಿಎಂ ಸ್ಥಾನದಿಂದ ಸಿಎಂ ಬಿಎಸ್ ಯಡಿಯೂರಪ್ಪ ಇಳಿದರೇ ಕಾಂಗ್ರೆಸ್ ಗೆ ಲಾಭವಾಗಲಿದೆ ಎಂದು ಮಾಜಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.jk-logo-justkannada-logo

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ರಾಮಲಿಂಗರೆಡ್ಡಿ, ಐದಾರು ತಿಂಗಳಿನಿಂದ ಸಿಎಂ ಬಿಎಸ್ ವೈಕೆಳಗಿಳಿಸಲು ಯತ್ನ ನಡೆಯುತ್ತಿದೆ. ಬಿಜೆಪಿಗೆ ದೇಶಕ್ಕೆ ಪ್ರಧಾನಿ ಮೋದಿ ಹೇಗೂ ಹಾಗೆ ಕರ್ನಾಟಕಕ್ಕೆ ಬಿಎಸ್ ಯಡಿಯೂರಪ್ಪ. ರಾಜಕೀಯ ಬಣ ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಬಿಜೆಪಿಯಲ್ಲೇ ಹೆಚ್ಚು ಇದೆ. ಒಂದು ವೇಳೆ ಒಂದು ವೇಳೆ ಸಿಎಂ ಸ್ಥಾನದಿಂದ ಸಿಎಂ ಬಿಎಸ್ ಯಡಿಯೂರಪ್ಪ ಇಳಿದರೇ ಕಾಂಗ್ರೆಸ್ ಗೆ ಲಾಭವಾಗಲಿದೆ ಎಂದು ತಿಳಿಸಿದರು.bs-yeddyurappa-cm-position-benefit-congress-former-minister-ramalingareddy

ಡಿ.ಕೆ ಶಿವಕುಮಾರ್ ರನ್ನ ಮೀರ್ ಸಾದಿಕ್ ಎಂದ ಡಿಸಿಎಂ ಅಶ್ವಥ್ ನಾರಾಯಣ್ ವಿರುದ್ದ ಕಿಡಿಕಾರಿದ ರಾಮಲಿಂಗರೆಡ್ಡಿ,   ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಯಾರು ಅಂತಾ ನನ್ನ ಬಳಿ ಪೂರ್ಣ ಮಾಹಿತಿ ಇದೆ. ಆ ವೇಳೆ ನಾನು ಸಕ್ರಿಯನಾಗಿದ್ದೆ. ಡಿಸಿಎಂ ಈ ರೀತಿ ಮಾತನಾಡಬಾರದು.  ನಮ್ಮವರೂ ಇಂತಹ ಪದ ಬಳಕೆ ಮಾಡಿದ್ರೆ ಶೋಭೆ ತರಲ್ಲ ಎಂದು ತಿಳಿಸಿದರು.

Key words: bs yeddyurappa-  CM position-Benefit-congress- Former Minister -Ramalingareddy