ರಾಜಕೀಯ ಸೇರ್ಪಡೆ ವದಂತಿಗೆ ತೆರೆ ಎಳೆದ ರಾಧಿಕಾ ಕುಮಾರಸ್ವಾಮಿ

ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in): ರಾಜಕೀಯ ಸೇರುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ.

ಸದ್ಯ ದಮಯಂತಿ ರಿಲೀಸ್ ಗೆ ಎದುರು ನೋಡುತ್ತಿರುವ ರಾಧಿಕಾ ಈ ಕುರಿತು ಮಾತನಾಡಿದ್ದಾರೆ. ನನಗೆ ಸಿನಿಮಾ ಇಷ್ಟ. ಸಾಧ್ಯವಾಗುವವರೆ ಸಿನಿಮಾದಲ್ಲಿ ನಟಿಸುತ್ತೇನೆ. ನಂತರ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ.

ರಾಜಕೀಯ ನನಗೆ ಆಗಿ ಬರೊಲ್ಲ. ಹೀಗಾಗಿ ರಾಜಕೀಯ ಸೇರ್ಪಡೆ ವಿಷಯವೂ ನನ್ನ ಮನಸ್ಸಿನಲ್ಲಿಲ್ಲ ಎಂದಿದ್ದಾರೆ. ಅಂದಹಾಗೆ ನವರಾತ್ರಿಗೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡುವ ಪ್ಲಾನ್ ಮಾಡಿದ್ದಾರಂತೆ ರಾಧಿಕಾ.