ಚೀನಾ ಓಪನ್‌ ಬ್ಯಾಡ್ಮಿಂಟನ್: ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಸೋತ ಸಿಂಧು

ಚಾಂಗ್‌ಜೂ (ಚೀನ), ಸೆಪ್ಟೆಂಬರ್ 20, 2019 (www.justkannada.in): ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಅವರ ‘ಚೀನಾ ಓಪನ್‌’ ಓಟ ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಕೊನೆಗೊಂಡಿದೆ.

‘ತ್ರೀ ಗೇಮ್‌ ಥ್ರಿಲ್ಲರ್‌’ನಲ್ಲಿ ಅವರನ್ನು ಥಾಯ್ಲೆಂಡಿನ ಪೊರ್ಣಪವೀ ಚೊಚುವೊಂಗ್‌ 12-21, 21-13, 21-19 ಅಂತರದಿಂದ ಮಣಿಸಿದರು.

ಮೊದಲ ಗೇಮ್‌ ಗೆದ್ದ ಸಿಂಧು ಉತ್ತಮ ಆರಂಭವನ್ನೇ ಕಂಡುಕೊಂಡಿದ್ದರು. ಆದರೆ ದ್ವಿತೀಯ ಗೇಮ್‌ನಲ್ಲಿ ವೇಳೆ ಭಾರೀ ಹಿನ್ನಡೆ ಅನುಭವಿಸಿದರು. ನಿರ್ಣಾಯಕ ಗೇಮ್‌ನಲ್ಲಿ ಭಾರೀ ಪೈಪೋಟಿ ಯೊಡ್ಡಿದರೂ ಪ್ರಯೋಜನವಾಗಲಿಲ್ಲ.